
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದಲ್ಲಿ ಮಂಗಳವಾರ (ಏಪ್ರಿಲ್ 1) ರಂದು ಭಯಾನಕ ತ್ರಿಬಲ್ ಮರ್ಡರ್ ನಡೆದಿದ್ದು, ತಂದೆಯೊಬ್ಬ ತನ್ನ ಅತ್ತೆ, ನಾದಿನಿ ಹಾಗೂ ಏಳು ವರ್ಷದ ಮಗಳನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.
ಘಟನೆ ವಿವರ:
ಅತ್ತೆ ಜ್ಯೋತಿ (50), ಪತ್ನಿ ಸಿಂಧು (26) ಮತ್ತು 7 ವರ್ಷದ ಮಗುವನ್ನು ಅವರದೇ ಮನೆಯೊಳಗೆ ಹತ್ಯೆ ಮಾಡಲಾಗಿದೆ. ಆರೋಪಿ ರತ್ನಾಕರ್, ಶಾಲಾ ವಾಹನ ಚಾಲಕನಾಗಿದ್ದು, ನಾಡ ಬಂದೂಕಿನ ಮೂಲಕ ಈ ಕೃತ್ಯ ಎಸಗಿದ್ದಾನೆ. ಕೊಲೆ ವೇಳೆ ಸಿಂಧುವಿನ ಪತಿ ಅವಿನಾಶ್ ಕಾಲಿಗೆ ಗುಂಡೇಟು ಬಿದ್ದಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಲೆಗೆ ಕಾರಣ:
ರತ್ನಾಕರ್ ಪತ್ನಿ ಎರಡು ವರ್ಷಗಳ ಹಿಂದೆ ತಮ್ಮ ಕುಟುಂಬವನ್ನು ತೊರೆದಿದ್ದರು. ಮಗಳು ತಂದೆಯೊಂದಿಗೇ ಇದ್ದಳು. ಮಗಳಿಗೆ ಶಾಲೆಯಲ್ಲಿ ಸ್ನೇಹಿತರು “ನಿನ್ನ ಅಮ್ಮ ಎಲ್ಲಿ?” ಎಂದು ಕೇಳಿದಾಗ, ಆಕೆ ನೋವಿನಿಂದ ಈ ಮಾತನ್ನು ತಂದೆಗೆ ಹೇಳಿದ್ದಳು. ಇದರಿಂದ ಮಾನಸಿಕವಾಗಿ ನೊಂದಿದ್ದ ಈತ , ತನ್ನ ಕುಟುಂಬದವರಿಗೆ ಈ ವಿಷಯ ತಿಳಿಸಿದ್ದೇನೆ, ನನ್ನ ಪತ್ನಿ ನನಗೆ ಮೋಸ ಮಾಡಿ ಹೋದಳು, ನಾನು ಮಗಳನ್ನು ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾ ಕೊಲೆಯ ನಂತರ ರತ್ನಾಕರ್ ಸೆಲ್ಫಿ ವಿಡಿಯೋ ಮಾಡಿದ್ದು, ತನ್ನ ಪತ್ನಿಯ ಅಗಲಿಕೆ, ಮಗಳ ಭಾವನಾತ್ಮಕ ಪ್ರಶ್ನೆಗಳ ಕಾರಣದಿಂದ ಈ ಕೃತ್ಯ ನಡೆಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಪೊಲೀಸರ ಕ್ರಮ:
ಘಟನೆ ಬಳಿಕ ರತ್ನಾಕರ್ ಪರಾರಿಯಾಗಿದ್ದು, ಬಾಳೆಹೊನ್ನೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಹಿಡಿಯಲು ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.