
ಶ್ರೀಮಹಾವಿಷ್ಣು ಮೂರ್ತಿ ಮತ್ತು ಮಹಾಗಣಪತಿ ದೇವಸ್ಥಾನ ಚಿಕ್ಕಲ್ ಬೆಟ್ಟು ಇದರ ಜೀರ್ಣೋದ್ಧಾರ ಸಂಕಲ್ಪದೊಂದಿಗೆ ಅಷ್ಟ ಮಂಗಲ ಪ್ರಶ್ನಾ ಚಿಂತನೆಯನ್ನು ವೇದ ಮೂರ್ತಿ ಜಾರ್ಕಳ ಪ್ರಸಾದ ತಂತ್ರಿಗಳು ಮತ್ತು ವೇದಮೂರ್ತಿ ಪ್ರವೀಣ್ ತಂತ್ರಿ ಮಟ್ಟು ಇವರ ನೇತೃತ್ವದಲ್ಲಿ ಇದೆ ಬರುವ ದಿನಾಂಕ 26-03-2025 ರಿಂದ ಮೊದಲುಗೊಂಡು 27-03-2025 ರ ವರೆಗೆ ನಡೆಸುವುದಾಗಿ ದೇವಳದ ಜೀರ್ಣೋದ್ದಾರ ಸಮಿತಿ ಮತ್ತು ಆಡಳಿತ ಮಂಡಳಿ ಯವರು ನಿಶ್ಚಯಿಸಿರುತ್ತಾರೆ.
ಹಿರ್ಗಾನ ಗ್ರಾಮಕ್ಕೆ ಒಳಪಡುವ ಹಲವು ಊರುಗಳಿಗೆ ಗ್ರಾಮ ದೇವಸ್ಥಾನವಾಗಿರುವ ಈ ದೇವಾಲಯದ ಜೀರ್ಣೋದ್ದಾರ ಸಂಕಲ್ಪಕ್ಕೆ ಊರ ಪರವೂರ ಭಕ್ತಾದಿಗಳು ಸಕ್ರಿಯವಾಗಿ ತನು -ಮನ-ಧನ ದೊಂದಿಗೆ ಸಹಾಯ ಪೂರ್ವಕವಾಗಿ ಭಾಗವಹಿಸಿ ಗ್ರಾಮ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಜೀರ್ಣೋದ್ಧಾರ ಸಮಿತಿ ಹಾಗೂ ಆಡಳಿತ ಮಂಡಳಿ ಮನವಿ ಮಾಡಿದೆ.