
ಕಾರ್ಕಳ : ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಸನ್ನ ಎಂ.ಎಸ್ ಅವರು ಸಬ್ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಕಾರ್ಕಳ ನಗರ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ ಪ್ರಸನ್ನ ಅವರು ಪಡುಬಿದ್ರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಇದೀಗ ಮತ್ತೆ ಕಾರ್ಕಳದ ಗ್ರಾಮಾಂತರ ಠಾಣೆಗೆ ನೇಮಕಗೊಂಡಿದ್ದಾರೆ.
ಪ್ರಸನ್ನ ಎಂ.ಎಸ್ ಅವರನ್ನು ಈ ಬಾರಿಗೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗಿತ್ತು ಎಂಬುದೇ ವಿಶೇಷ. ವೃತ್ತಿಪರ ನಿಷ್ಠೆ ಮತ್ತು ಸಾಧನೆಗಾಗಿ ಅವರಿಗೆ ಈ ಗೌರವ ಲಭಿಸಿದೆ.
ಈ ಹಿಂದೆ ಈ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ದಿಲೀಪ್ ಅವರು ಇದೀಗ ವರ್ಗಾವಣೆ ಹೊಂದಿದ್ದು, ಅವರ ಮುಂದಿನ ನೇಮಕಸ್ಥಳ ಯಾವುದು ಎಂಬುದು ಇನ್ನೂ ಖಾತ್ರಿಯಾಗಿಲ್ಲ.