
ಪರ್ಕಳ: “ಯೂತ್ ಬೆಸ್ಟ್ ಫ್ರೆಂಡ್ಸ್, ಪರ್ಕಳ” ಸಂಘದ ನೂತನ ಸಾಲಿನ ಅಧ್ಯಕ್ಷರಾಗಿ ಶ್ರೀ ಚೇತನ್ ಕುಲಾಲ್ ಬಡಗಬೆಟ್ಟು ಹಾಗೂ ಕಾರ್ಯದರ್ಶಿಯಾಗಿ ಶ್ರೀ ಪ್ರಕೃತ್ ಹೆಗ್ಡೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಹಿಂದಿನ ವರ್ಷಗಳಲ್ಲಿ ಸಂಘದ ವಿವಿಧ ಹುದ್ದೆಗಳನ್ನು ಉತ್ತಮವಾಗಿ ನಿರ್ವಹಿಸಿದ ಎಲ್ಲ ಗೌರವಾನ್ವಿತರು ಹಾಗೂ ಸದಸ್ಯರಿಗೆ ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಧನ್ಯವಾದಗಳನ್ನು ಸಲ್ಲಿಸಿದ್ದಾರೆ . ಜೊತೆಗೆ, ಹಿಂದಿನಂತೆ ಮುಂದೆಯೂ ಸಂಘದ ಎಲ್ಲಾ ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ಸಹಕಾರ ನೀಡುವಂತೆ ಎಲ್ಲರಲ್ಲೂ ಕೋರಿದ್ದಾರೆ.
ಸಂಸ್ಥೆಯು ಯುವಜನರಲ್ಲಿ ನೇತೃತ್ವದ ಗುಣ, ಸಾಮಾಜಿಕ ಕಳಕಳಿ ಹಾಗೂ ಸಂಘಟನಾ ಶಕ್ತಿಯನ್ನು ಬೆಳೆಸುವ ಹಿತದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ನೂತನ ನೇತೃತ್ವದಿಂದಾಗಿ ಇನ್ನಷ್ಟು ಉತ್ಸಾಹದಿಂದ ಕಾರ್ಯಚಟುವಟಿಕೆಗಳು ನಡೆಯುವ ನಿರೀಕ್ಷೆಯಿದೆ.