
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ತಿನಿಸುಗಳಲ್ಲಿ ಕಲಬೆರಿಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಪನ್ನೀರ್‌ನಲ್ಲಿಯೂ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿರುವ ಕುರಿತು ಆಹಾರ ಸುರಕ್ಷತಾ ಇಲಾಖೆ ಆತಂಕಕಾರಿ ವರದಿ ನೀಡಿದೆ.
ಇದಕ್ಕೂ ಮುನ್ನ ಕಲ್ಲಂಗಡಿಯಲ್ಲಿ ಸಿಹಿ ತಿಂಡಿ, ಇಡ್ಲಿಗೆ ಬಳಸುವ ಪ್ಲಾಸ್ಟಿಕ್ ಮತ್ತು ಕೆಮಿಕಲ್‌ಗಳಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿತ್ತು. ಇದೀಗ ಪನ್ನೀರ್ ಅನ್ನು ಮೆದುವಾಗಿಸಲು ಬಳಸಲಾಗುವ ಕೆಲವು ರಾಸಾಯನಿಕಗಳು ಕ್ಯಾನ್ಸರ್‌ಗ್ಳಿಗೆ ಕಾರಣವಾಗಬಹುದು ಎಂದು ವರದಿಯು ಎಚ್ಚರಿಸುತ್ತದೆ.
ರಾಜ್ಯದಲ್ಲಿ ಸುಮಾರು 80ಕ್ಕೂ ಹೆಚ್ಚು ಕಡೆಗಳಿಂದ ಪನ್ನೀರ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದಾಗ, ಅದರಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಪ್ರಮಾಣವೂ ಕಡಿಮೆಯಾಗಿರುವುದು ದೃಢಪಟ್ಟಿದೆ. ಈ ವಿಚಾರವಾಗಿ ಆರೋಗ್ಯ ಇಲಾಖೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.