ವೈದ್ಯರಿಗೂ ಸಿಗದ ಕಾಯಿಲೆಗೆ ಚಾಟ್‌ಜಿಪಿಟಿ ಪರಿಹಾರ: AI ಶಕ್ತಿಯಿಂದ ಮಹಿಳೆಗೆ ಹೊಸ ಜೀವ!

Date:

spot_img

ಹೊಸದಿಲ್ಲಿ: ವೈದ್ಯರಿಂದಲೂ ಪತ್ತೆ ಹಚ್ಚಲಾಗದ ವಿಚಿತ್ರ ಕಾಯಿಲೆಯೊಂದಕ್ಕೆ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ‘ಚಾಟ್‌ಜಿಪಿಟಿ’ ಕಾರಣವನ್ನು ಕಂಡುಹಿಡಿದು, ಮಹಿಳೆಯೊಬ್ಬರ ಜೀವವನ್ನು ಉಳಿಸಿದೆ ಎಂದು ಶ್ರೇಯಾ ಎಂಬವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಪಾದಿಸಿದ್ದಾರೆ.

ಶ್ರೇಯಾ ಅವರ ತಾಯಿ ಒಂದೂವರೆ ವರ್ಷದಿಂದ ನಿರಂತರ ಕೆಮ್ಮಿನಿಂದ ಬಳಲುತ್ತಿದ್ದರು. ಇದರಿಂದ ಅವರ ಜೀವಕ್ಕೆ ಅಪಾಯವೂ ಇತ್ತು. ಹಲವು ವೈದ್ಯರನ್ನು ಸಂಪರ್ಕಿಸಿದರೂ, ರೋಗದ ಮೂಲ ಕಾರಣ ಏನೆಂದು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. ನಿರಾಸೆಗೊಂಡ ಶ್ರೇಯಾ, ತಮ್ಮ ತಾಯಿಯ ರೋಗಲಕ್ಷಣಗಳ ವಿವರಗಳನ್ನು ಚಾಟ್‌ಜಿಪಿಟಿಗೆ ನೀಡಿದಾಗ, ಆ ಚಾಟ್‌ಬಾಟ್ ಅಚ್ಚರಿಯ ಮಾಹಿತಿಯನ್ನು ನೀಡಿದೆ. ಶ್ರೇಯಾ ಅವರ ತಾಯಿಯ ರಕ್ತದೊತ್ತಡದ ನಿರ್ದಿಷ್ಟ ಔಷಧಿಯಿಂದಲೇ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಚಾಟ್‌ಜಿಪಿಟಿ ತಿಳಿಸಿದೆ.

ಚಾಟ್‌ಜಿಪಿಟಿ ನೀಡಿದ ಮಾಹಿತಿ ಆಧಾರದ ಮೇಲೆ, ವೈದ್ಯರ ಸಲಹೆ ಪಡೆದು ಔಷಧವನ್ನು ಬದಲಾಯಿಸಿದಾಗ, ಶ್ರೇಯಾ ಅವರ ತಾಯಿಯ ಆರೋಗ್ಯ ಸುಧಾರಿಸಿದೆ ಎಂದು ಅವರು ಹಂಚಿಕೊಂಡಿದ್ದಾರೆ. ಈ ಘಟನೆಯು ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಸಾಮರ್ಥ್ಯ ಮತ್ತು ಭವಿಷ್ಯದ ಬಗ್ಗೆ ಚರ್ಚೆಗೆ ಗ್ರಾಸ ಒದಗಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಾಡಿಗೆ ಸಂಗಾತಿ ಉದ್ಯಮ: ಒಂಟಿತನಕ್ಕೆ ತಾತ್ಕಾಲಿಕ ಪರಿಹಾರವೇ?

ಬೆಳೆಯುತ್ತಿರುವ ಬಾಡಿಗೆ ಸಂಗಾತಿ ಸಂಸ್ಕೃತಿಯ ಸಂಪೂರ್ಣ ವಿಶ್ಲೇಷಣೆ ಮತ್ತು ಉದ್ಯಮದ ಪ್ರಮುಖ ವಿವರಗಳು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.