spot_img

ಪದ್ಮಶ್ರಿ ಪುರಸ್ಕೃತ ಶತಾಯುಷಿ ಯೋಗ ಗುರು ಬಾಬಾ ಶಿವಾನಂದ್ ವಿಧಿವಶ

Date:

spot_img

ಯು.ಬಿ.ಎನ್.ಡಿ : ಖ್ಯಾತ ಯೋಗ ಗುರು, ಪದ್ಮಶ್ರೀ ಪುರಸ್ಕೃತ ಬಾಬಾ ಶಿವಾನಂದ್ ಭಾನುವಾರ 128ನೇ ವಯಸ್ಸಿನಲ್ಲಿ ನಿಧನರಾದರು. ಇಂದಿನ ಬಾಂಗ್ಲಾದೇಶದ ಸಿಟ್ ಜಿಲ್ಲೆಯಲ್ಲಿ 1896ರ ಆಗಸ್ಟ್ 8ರಂದು ಜನಿಸಿದ್ದ ಅವರು ಆರು ವರ್ಷದೊಳಗೇ ತಮ್ಮ ಪೋಷಕರನ್ನು ಕಳೆದುಕೊಂಡು ತಪಸ್ಸು ಮತ್ತು ಶಿಸ್ತಿನ ಜೀವನವನ್ನು ಅಳವಡಿಸಿಕೊಂಡಿದ್ದರು.

ಅರ್ಧ ಹೊಟ್ಟೆಯ ಆಹಾರ, ನಿಯಮಿತ ಯೋಗಾಭ್ಯಾಸ ಮತ್ತು ಆತ್ಮಶುದ್ಧಿಯಿಂದ ಬದುಕಿದ ಅವರು ಪ್ರತಿದಿನ ಮುಂಜಾನೆ 3 ಗಂಟೆಗೆ ಎದ್ದು ಎಲ್ಲ ಕಾರ್ಯಗಳನ್ನು ಸ್ವತಃ ಮಾಡುತ್ತಿದ್ದರು. ತಾನು ಬೇಯಿಸಿದ ಆಹಾರವನ್ನೇ ಸೇವಿಸುವ ಅವರು ಚಾಪೆಯ ಮೇಲೆ ಮಲಗುತ್ತಿದ್ದರು.

ಯೋಗ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಮಹತ್ತರ ಕೊಡುಗೆಗಾಗಿ ಅವರಿಗೆ 2022ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಬಾಬಾ ಶಿವಾನಂದ್ ಅವರ ನಿಧನದ ಸುದ್ದಿ ಕೇಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. “ಅವರ ಜೀವನದ ಶಿಸ್ತಿನಿಂದ ಪ್ರತಿಯೊಬ್ಬರೂ ಪ್ರೇರಣೆ ಪಡೆಯಬೇಕು” ಎಂದು ಪ್ರಧಾನಿ ಹೇಳಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಜಾಗತಿಕ AI ರೇಸ್‌ನಲ್ಲಿ ಸ್ವಿಟ್ಜರ್ಲೆಂಡ್: ಸಂಪೂರ್ಣ ಮುಕ್ತ-ಮೂಲ, ಬಹುಭಾಷಾ LLM ಬಿಡುಗಡೆಗೆ ಸಜ್ಜು

ಕೃತಕ ಬುದ್ಧಿಮತ್ತೆ (AI) ಪ್ರಾಬಲ್ಯಕ್ಕಾಗಿ ನಡೆಯುತ್ತಿರುವ ಜಾಗತಿಕ ಸ್ಪರ್ಧೆಯಲ್ಲಿ ಅಮೆರಿಕ ಮತ್ತು ಚೀನಾಗಳ ನಡುವಿನ ಪೈಪೋಟಿ ಮುಂಚೂಣಿಯಲ್ಲಿದ್ದರೂ, ಇದೀಗ ಸ್ವಿಟ್ಜರ್ಲೆಂಡ್ ಕೂಡ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದೆ.

ಚಿಕ್ಕವನಿದ್ದಾಗಿನಿಂದಲೇ ಅಪರಾಧ: ಉದ್ಯಮಿಗಳಿಗೆ ವಂಚಿಸಿದ ರೋಶನ್ ಸಲ್ದಾನ್ಹಾ ಬಗ್ಗೆ ಸ್ಫೋಟಕ ಮಾಹಿತಿ

ಉದ್ಯಮಿಗಳಿಗೆ ಬಹುಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರೋಶನ್ ಸಲ್ದಾನ್ಹಾ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಂಡಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಇಂದು ಪೂಜ್ಯ ಪರ್ಯಾಯ ಶ್ರೀಪಾದರು ಗೀತಾಮಂದಿರದಲ್ಲಿ ಬಿಡುಗಡೆಗೊಳಿಸಿದರು.

ಸಹಕಾರ ತತ್ವದಡಿ ಪರಿಸರ ಸಂರಕ್ಷಣೆ: ಮಲ್ಪೆಯಲ್ಲಿ ಯಶ್‌ಪಾಲ್ ಸುವರ್ಣರಿಂದ ಶ್ಲಾಘನೆ

ಸಹಕಾರ ತತ್ವದಡಿ ಸೇವೆ ಸಲ್ಲಿಸುವುದರ ಜೊತೆಗೆ ಪರಿಸರ ಸಂರಕ್ಷಣೆಯಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಶ್ಲಾಘನೀಯ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.