
ಮುಂಬಯಿ: ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿ ಲೋಕದಲ್ಲಿ ವಿಚ್ಛೇದನದ ಸುದ್ದಿಗಳು ಹೆಚ್ಚಾಗುತ್ತಿವೆ. ಈಗ ಕಿರುತೆರೆ ನಟಿ ಅದಿತಿ ಶರ್ಮಾ ಮತ್ತು ಅಭಿನೀತ್ ಕೌಶಿಕ್ ದಾಂಪತ್ಯ ಜೀವನ ವಿಚ್ಛೇದನ ಹಂತಕ್ಕೆ ಬಂದಿದೆ.
2024ರ ನವೆಂಬರ್ 12ರಂದು ಅದಿತಿ ಮತ್ತು ಅಭಿನೀತ್ ವಿವಾಹವಾಗಿದ್ದು, ಮುಂಬೈನ ಗೋರೆಗಾಂವ್‌ನಲ್ಲಿ ಕೆಲ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ನೆರವೇರಿತ್ತು. ಅದಿತಿ ತಮ್ಮ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವ ಆತಂಕದಿಂದ ಗುಟ್ಟಾಗಿ ಮದುವೆಯಾಗಲು ನಿರ್ಧರಿಸಿದ್ದರು.
“ಅದಿತಿ ಕಳೆದ ಒಂದೂವರೆ ವರ್ಷಗಳಿಂದ ನನ್ನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದರು. ನಾನು ಆ ಸಮಯದಲ್ಲಿ ಸಿದ್ಧನಾಗಿರಲಿಲ್ಲ. ಒಪ್ಪಿಕೊಂಡ ನಂತರ, ಮದುವೆ ಗುಟ್ಟಾಗಿ ಮಾಡುವಂತೆ ಕೇಳಿದಾಗ ನಾನು ಒಪ್ಪಿಕೊಂಡೆ,” ಎಂದು ಅಭಿನೀತ್ ತಿಳಿಸಿದ್ದಾರೆ.
ಮದುವೆಯ ಬಳಿಕ ಇಬ್ಬರು ಒಟ್ಟಾಗಿ ವಾಸಿಸುತ್ತಿದ್ದು, ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದರು. ಇದಾದ ಬಳಿಕ ಅದಿತಿ ‘ಅಪೊಲ್ಲೆನಾ’ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಸಹ ನಟ ಸಮರ್ಥ್ಯ ಅವರೊಂದಿಗೆ ಆಪ್ತ ಸಂಬಂಧ ಹೊಂದಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅಭಿನೀತ್ ಮತ್ತು ಅದಿತಿಯ ನಡುವೆ ಮನಸ್ತಾಪ ಉಂಟಾಗಿದೆ.
ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದು, ಅದಿತಿ “ನಮ್ಮ ಮದುವೆಗೆ ಮಾನ್ಯತೆ ಇಲ್ಲ” ಎಂದು ಹೇಳಿದ್ದಾಳೆ ಎಂದು ಅಭಿನೀತ್ ಅವರ ವಕೀಲ ರಾಕೇಶ್ ಶೆಟ್ಟಿ ತಿಳಿಸಿದ್ದಾರೆ.
ವಿಷಯ ಇನ್ನಷ್ಟು ಬಿಗಡಾಯಿಸಿಕೊಂಡು, ಅದಿತಿಯ ಕುಟುಂಬ ಅಭಿನೀತ್ ಬಳಿ 25 ಲಕ್ಷ ರೂ. ಸೆಟಲ್‌ಮೆಂಟ್ ಗೆ ಬೇಡಿಕೆ ಇಟ್ಟಿದೆ ಎಂದು ಹೇಳಲಾಗುತ್ತಿದೆ. ವಕೀಲರ ಭೇಟಿಯ ಸಂದರ್ಭದಲ್ಲಿ ಅದಿತಿಯ ತಂದೆ ಅಭಿನೀತ್‌ಗೆ ಕಪಾಳಮೋಕ್ಷ ಮಾಡಿದ್ದರಿಂದ ಎರಡೂ ಕುಟುಂಬಗಳ ನಡುವೆ ಸಂಘರ್ಷ ಸೃಷ್ಟಿಯಾಗಿದೆ.