spot_img

ನಿಟ್ಟೆಯಲ್ಲಿ ಅ.೧೩ ರಂದು ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

Date:

spot_img
spot_img

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಸ್ಪಿಕ್-ಮೆಕೆ ಮಂಗಳೂರು ಚಾಪ್ಟರ್ ನ ಸಹಯೋಗದೊಂದಿಗೆ ಅಕ್ಟೋಬರ್ ೧೩ ರಂದು ಮನಮೋಹಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸಂಗೀತ ಕಾರ್ಯಕ್ರಮವನ್ನು ಪ್ರಸಿದ್ಧ ಗಾಯಕಿ ವಿದುಷಿ ಅಮೃತಾ ಮುರಳಿ ಅವರು ನಡೆಸಿಕೊಟ್ಟರು. ಅವರಿಗೆ ಮೃದಂಗದಲ್ಲಿ ವಿದ್ವಾನ್ ಬಿ. ಎಸ್. ಪ್ರಶಾಂತ್ ಮತ್ತು ವಯೊಲಿನ್ ನಲ್ಲಿ ವಿದುಷಿ ಅದಿತಿ ಕೃಷ್ಣಪ್ರಕಾಶ್ ಸಹಕರಿಸಿದರು.

ಸೊಸೈಟಿ ಫಾರ್ ದಿ ಪ್ರಮೋಷನ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಅಂಡ್ ಕಲ್ಚರ್ ಅಮಾಂಗ್ ಯೂತ್ (ಸ್ಪಿಕ್ ಮೆಕೆ) ಆಶ್ರಯದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಸಂಗೀತಾಸಕ್ತರು ಭಾಗವಹಿಸಿದ್ದರು. ನಿಟ್ಟೆ ತಾಂತ್ರಿಕ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಕೃಷ್ಣರಾಜ ಜೋಯಿಸ ಕಾರ್ಯಕ್ರಮ ಸಂಯೋಜಿಸಿದರು. ಅಂತಿಮ ವರ್ಷದ ರೊಬೊಟಿಕ್ಸ್ ಮತ್ತು ಎಐ ವಿದ್ಯಾರ್ಥಿನಿ ಫರೀಜಾ ಕಾರ್ಯಕ್ರಮವನ್ನು ನಿರೂಪಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕೌಟುಂಬಿಕ ಕಲಹದಿಂದ ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ಕೌಟುಂಬಿಕ ಕಲಹದ ತೀವ್ರ ಸ್ವರೂಪದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನೇ ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆಗೈದಿರುವ ಭೀಕರ ಘಟನೆ ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ಬುಧವಾರ (ಅ. 15) ನಡೆದಿದೆ.

ಉಡುಪಿಯಲ್ಲಿ ಟೆಲಿಗ್ರಾಮ್ ಹೂಡಿಕೆ ವಂಚನೆ: ಯುಕೆ ಸರ್ಕಾರಿ ಸಂಸ್ಥೆ ಎಂದು ನಂಬಿಸಿ ವ್ಯಕ್ತಿಗೆ ₹29.68 ಲಕ್ಷ ವಂಚನೆ

ಉಡುಪಿಯ 41 ವರ್ಷದ ವ್ಯಕ್ತಿಯೊಬ್ಬರು ಟೆಲಿಗ್ರಾಮ್ ಮೂಲಕ ಆನ್‌ಲೈನ್ ಹೂಡಿಕೆ ವಂಚನೆಗೆ ಬಲಿಯಾಗಿದ್ದು, ಬರೋಬ್ಬರಿ ₹29,68,973 ಹಣವನ್ನು ಕಳೆದುಕೊಂಡಿದ್ದಾರೆ.

ಉಡುಪಿಯ ಛಾಯಾಗೆ ಭಾರತ ಸರ್ಕಾರದ ರಾಷ್ಟ್ರೀಯ ಕರಾಟೆ ತಂಡದಲ್ಲಿ ಸ್ಥಾನ: ಏಷ್ಯನ್ ಗೇಮ್ಸ್‌ಗೆ ಆಯ್ಕೆ

ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ (MGM) ವಿದ್ಯಾರ್ಥಿನಿಯಾದ ಛಾಯಾ, -68 ಕೆಜಿ ತೂಕದ ಕುಮಿತಿ ವಿಭಾಗದಲ್ಲಿ ಭಾಗವಹಿಸಿ ಟಾಪ್ ನಾಲ್ಕು ಕ್ರೀಡಾಪಟುಗಳಲ್ಲಿ ಒಬ್ಬರಾಗಿ ಆಯ್ಕೆಯಾಗುವ ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾಗಿದ್ದಾರೆ.

ರೈತರಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಸಿಹಿ ಸುದ್ದಿ: ಕೊಪ್ಪಳದಲ್ಲಿ ಕೃಷಿ ಸಂಸ್ಕರಣಾ ಘಟಕ ತರಬೇತಿ ಕೇಂದ್ರ ಉದ್ಘಾಟನೆ

ಭಾರತ ಸರಕಾರದ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೊಪ್ಪಳ ಜಿಲ್ಲೆಯ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಕೃಷಿ ಸಂಸ್ಕರಣಾ ಘಟಕ ತರಬೇತಿ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.