
“ವಿದ್ಯಾರ್ಥಿಗೆ ಕನಸು ಮತ್ತು ದೂರದೃಷ್ಟಿ ಬಹುಮುಖ್ಯ” : ಸಿ.ಎ ಗೋಪಾಲಕೃಷ್ಣ ಭಟ್
ಕಾರ್ಕಳ : ಯೋಜನಾ ಬದ್ಧ ಅಧ್ಯಯನ, ಶಿಸ್ತುಬದ್ಧ ಕಲಿಕೆಯಿಂದ ಉನ್ನತ ಗುರಿಗಳನ್ನು ತಲುಪಲು ವಾಣಿಜ್ಯ ವಿದ್ಯಾರ್ಥಿಗಳಿಗೆ ಬಹು ಅವಕಾಶಗಳಿವೆ. ಜಾಗತೀಕರಣ ಮತ್ತು ತಂತ್ರಜ್ಞಾನಗಳ ಬಳಕೆಯಿಂದ ವಾಣಿಜ್ಯ ಕ್ಷೇತ್ರದಲ್ಲಿ ಇಂದು ಉದ್ಯೋಗಾವಕಾಶಗಳು ಹೆಚ್ಚಿನ ಯುವಜನತೆಯನ್ನು ಆಕರ್ಷಿಸುತ್ತಿವೆ ಎಂದು ತ್ರಿಷಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿ.ಎ ಗೋಪಾಲಕೃಷ್ಣ ಭಟ್ ಹೇಳಿದರು.
ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನಡೆದ ವೃತ್ತಿಪರ ಕೋರ್ಸುಗಳ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿ.ಕಾಂ ಪದವಿಯ ಜೊತೆಗೆ N.Q ಮಾಡಬಹುದು. ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಅತ್ಯಂತ ಪ್ರತಿಷ್ಠಿತ ಮತ್ತು ಹೆಚ್ಚು ಪ್ರತಿಫಲ ನೀಡುವ ವೃತ್ತಿ ಆಯ್ಕೆಗಳಲ್ಲಿ ಚಾರ್ಟಡ್ ಅಕೌಂಟೆಂಟ್, ಕಂಪೆನಿ ಸೆಕ್ರೆಟರಿ, ಎ.ಸಿ.ಸಿ.ಎ, ಸಿ.ಐ,ಎಂ.ಎ, ಎನ್.ಸಿ.ಎಫ್.ಎಂ, ಸಿ.ಎಂ.ಎ ಈ ಎಲ್ಲಾ ಕೋರ್ಸುಗಳ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಇದೇ ಸಂದರ್ಭ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ಉಷಾ ರಾವ್ ಯು, ಪಿ.ಆರ್.ಒ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ಡೀನ್ ಶ್ರೀ ಮಿಥುನ್ ಯು, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಮಿತ್ರಾ, ಉಪನ್ಯಾಸಕರಾದ ಶ್ರೀ ಶೈಲೇಶ್ ಶೆಟ್ಟಿ ಮತ್ತು ಶ್ರೀ ಮಂಜುನಾಥ್ ಮುದೂರು ಉಪಸ್ಥಿತರಿದ್ದರು.
ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ ಸ್ವಾಗತಿಸಿ, ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಗೀತಾ ಕುಲಾಲ್ ನಿರೂಪಿಸಿ ವಂದಿಸಿದರು.