
ನವದೆಹಲಿ: ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ ₹12 ಕೋಟಿ ಜೀವನಾಂಶ, ಬಿಎಂಡಬ್ಲ್ಯೂ ಕಾರು ಮತ್ತು ಮುಂಬೈನಲ್ಲಿ ಮನೆಯನ್ನು ಪರಿಹಾರವಾಗಿ ನೀಡಬೇಕೆಂದು ಕೋರಿದ್ದ ಮಹಿಳೆಯೊಬ್ಬರಿಗೆ, “ತಾವೇ ದುಡಿಯಬಹುದಲ್ಲವೇ?” ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ.
ಮಹಿಳೆಯು ಐಟಿ ವೃತ್ತಿಪರರು ಎಂಬ ವಿಚಾರವನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು, “ಮದುವೆಯಾದ 18 ತಿಂಗಳಿಗೆ ಐಷಾರಾಮಿ ಕಾರು ಬಯಸುವಿರಾ?” ಎಂದು ಕೇಳಿದರು.
ಅಲ್ಲದೆ, “ಎಂಬಿಎ ಪದವೀಧರರಾದ ನಿಮಗೆ ಬೆಂಗಳೂರು, ಹೈದರಾಬಾದ್‌ನಂತಹ ಸ್ಥಳಗಳಲ್ಲಿ ವೃತ್ತಿ ಮುಂದುವರೆಸಲು ಹೇರಳ ಅವಕಾಶಗಳಿವೆ. ನಿಮಗೆ ಈಗಾಗಲೇ ನೀಡಲು ಒಪ್ಪಿರುವಂತಹ ₹4 ಕೋಟಿ ಜೀವನಾಂಶ ಹಾಗೂ ಫ್ಲ್ಯಾಟ್ ಪಡೆದು ನಿಮ್ಮ ಜೀವನ ನಿರ್ವಹಣೆಯನ್ನು ಸ್ವತಃ ಮಾಡಿಕೊಳ್ಳಬಹುದು,” ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.