
ಬೆಂಗಳೂರು, ಏಪ್ರಿಲ್ 26: ರಾಜ್ಯದ 265 ಗ್ರಾಮಪಂಚಾಯತ್ ಸ್ಥಾನಗಳಿಗೆ ಉಪಚುನಾವಣೆಯ ಪರಿಷ್ಕೃತ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಮೇ 25 ರಂದು ಮತದಾನ ನಡೆಯಲಿದ್ದು, ಮೇ 28 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಮೂಲತಃ ಮೇ 11ರಂದು ನಡೆಯಬೇಕಿದ್ದ ಉಪಚುನಾವಣೆಯನ್ನು ರಾಜ್ಯ ಸರ್ಕಾರದ ಮನವಿಗೆ ಅನುಗುಣವಾಗಿ ಮುಂದೂಡಲಾಗಿತ್ತು. ಇದೀಗ ಪರಿಷ್ಕೃತ ವೇಳಾಪಟ್ಟಿಯಂತೆ ಮೇ 8ರಂದು ಅಧಿಕೃತ ಅಧಿಸೂಚನೆ ಹೊರಡಿಸಲಾಗುತ್ತದೆ.
ಮೇ 14ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 15ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೇ 17ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ಅವಧಿ ನಿಗದಿಯಾಗಿದೆ.
ಈ ಉಪಚುನಾವಣೆ 31 ಜಿಲ್ಲೆಗಳ 135 ತಾಲೂಕುಗಳ 223 ಗ್ರಾಮಪಂಚಾಯತ್‌ಗಳಲ್ಲಿ 265 ಸ್ಥಾನಗಳಿಗೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.