
ಚಿಕ್ಕಮಗಳೂರು, ಏಪ್ರಿಲ್ 9 : ಚಿಕ್ಕಮಗಳೂರಿನ ಕೊಪ್ಪ ತಾಲೂಕು ಜಲದುರ್ಗದ ಬಳಿ ಶೃಂಗೇರಿಗೆ ಬರುತ್ತಿದ್ದ KSRTC ಬಸ್ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಮನೆಯ ಮೇಲೆಯೇ ಪಲ್ಟಿಯಾಗಿ ಭಯಾನಕ ದುರಂತ ಸಂಭವಿಸಿದೆ.
ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದ್ದು, ಸುಮಾರು 50 ಮಂದಿ ಪ್ರಯಾಣಿಕರಿದ್ದ ಬಸ್ಸಿನಲ್ಲಿ 20 ಜನರಿಗೆ ಗಂಭೀರ ಹಾಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ತಕ್ಷಣವೇ ಜಯಪುರ ಹಾಗೂ ಕೊಪ್ಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಬಸ್ ಬೆಂಗಳೂರಿನಿಂದ ಶೃಂಗೇರಿಗೆ ಹೊರಟಿದ್ದು, ಜಲದುರ್ಗಕ್ಕೆ ಸಮೀಪ ಬಂದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಪಕ್ಕದ ಮನೆಯ ಮೇಲೆ ಬಸ್ ಏರಿ ಪಲ್ಟಿಯಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಪ್ರವಾಸಾ ಪ್ರದೇಶವಾದ ಶೃಂಗೇರಿಗೆ ಬಸ್ ಹೊರಟಿದ್ದು, ಹೆಚ್ಚಿನ ಪ್ರಯಾಣಿಕರು ತೀರ್ಥಯಾತ್ರಿಕರು ಎನ್ನಲಾಗಿದೆ. ಬಸ್ಸು ಪಲ್ಟಿಯಾದ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದು, ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.