spot_img

ಶ್ರೀ ಬ್ರಹ್ಮ ಬೈದೇರುಗಳ ಗರೋಡಿ (ರಿ.) ಕಲ್ಮಾಡಿ : ಪ್ರತಿಭಾ ಪುರಸ್ಕಾರ

Date:

spot_img

ಉಡುಪಿ: ಶ್ರೀ ಬ್ರಹ್ಮ ಬೈದೇರುಗಳ ಗರೋಡಿ(ರಿ.) ಕಲ್ಮಾಡಿ ಇದರ ವತಿಯಿಂದ ಗರೋಡಿಯ ಕೂಡುಕಟ್ಟಿನ ವ್ಯಾಪ್ತಿಯಲ್ಲಿರುವ ಬಿಲ್ಲವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಗರೋಡಿಯ ಆಡಳಿತ ಸಮಿತಿಯ ಅಧ್ಯಕ್ಷ ಶಶಿಧರ ಎಮ್. ವಡಭಾಂಡೇಶ್ವರ ಅವರ ಅಧ್ಯಕ್ಷತೆಯಲ್ಲಿ ಗರೋಡಿಯ ಪ್ರಾಂಗಣದಲ್ಲಿ ನಡೆಯಿತು.

ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ 29 ಮಂದಿ ವಿದ್ಯಾರ್ಥಿಗಳಿಗೆ ಶ್ರೀ ಬ್ರಹ್ಮ ಬೈದೇರುಗಳ ಗಂಧ ಪ್ರಸಾದವನ್ನು ನೀಡಿ, ಶಾಲು ಹೊದೆಸಿ, ಸ್ಮರಣೆಕೆ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಗೌರವಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ, ಉಪಾಧ್ಯಕ್ಷ ಗೋಪಾಲ್ ಸಿ. ಬಂಗೇರ, ಪ್ರಧಾನ ಕಾರ್ಯದರ್ಶಿ ಮನೋಹರ್ ಜತ್ತನ್ ಮಲ್ಪೆ, ಕೋಶಾಧಿಕಾರಿ ವಿನಯ್ ಕುಮಾರ್ ಕಲ್ಮಾಡಿ, ಜತೆ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜತೆ ಕೋಶಾಧಿಕಾರಿ ಜಯಕರ ಪೂಜಾರಿ ಕೊಡವೂರು, ಆಡಳಿತ ಸಮಿತಿ ಸದಸ್ಯರಾದ ಪ್ರಕಾಶ್ ಜಿ. ಕೊಡವೂರು, ಮಧ್ವನಗರ ಶಂಕರ ಪೂಜಾರಿ, ಶೇಖರ್ ಮಾಸ್ಟರ್ ಕಲ್ಮಾಡಿ, ಲಕ್ಷ್ಮಿಣ ಪೂಜಾರಿ ಅಂಬಲಪಾಡಿ, ಬಾಲಕೃಷ್ಣ ಕೊಡವೂರು, ರತ್ನಾಕರ್ ಅಮೀನ್ ಕೊಡವೂರು, ಜಗದೀಶ್ ಬಂಗೇರ ಮಲ್ಪೆ, ಸತೀಶ್ ಬಂಗೇರ ಮಲ್ಪೆ, ಗರೋಡಿ ಮನೆ ನಾರಾಯಣ ಪೂಜಾರಿ, ಸನ್ನುದಾರ ಗಿರೀಶ್ ಕಲ್ಮಾಡಿ, ಗರೋಡಿಯ ನಾಲ್ಕರೆ ಗುರಿಕಾರ ಹಾಗೂ ಕೂಡುಕಟ್ಟಿನ ಗುರಿಕಾರರು, ವಿದ್ಯಾರ್ಥಿಗಳ ಪೋಷಕರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಡಾಮಿನೋಸ್ ಪಿಜ್ಜಾಗೆ ದೊಡ್ಡ ದಂಡ: ಸಸ್ಯಾಹಾರಿ ಗ್ರಾಹಕನಿಗೆ ಮಾಂಸಾಹಾರ ನೀಡಿ ಭಾರೀ ಬೆಲೆ ತೆತ್ತ ಪಿಜ್ಜಾ ಕಂಪನಿ

ಸಸ್ಯಾಹಾರಿ ವ್ಯಕ್ತಿಯೊಬ್ಬರಿಗೆ ಮಾಂಸಾಹಾರಿ ಪಿಜ್ಜಾ ವಿತರಿಸಿದ ಪ್ರಕರಣದಲ್ಲಿ, ಧಾರವಾಡದ ಡಾಮಿನೋಸ್ ಪಿಜ್ಜಾ ಮಳಿಗೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹50,000 ದಂಡ ವಿಧಿಸಿದೆ.

ಜ್ಯಾಕ್ ಡಾರ್ಸೆ ಪರಿಚಯಿಸಿದ ‘ಬಿಟ್ಚಾಟ್’: ಇಂಟರ್ನೆಟ್ ಇಲ್ಲದೆ ಚಾಟ್ ಮಾಡುವ ಹೊಸ ಯುಗ!

ಟ್ವಿಟರ್ ಸಹ-ಸಂಸ್ಥಾಪಕ ಮತ್ತು ಬ್ಲಾಕ್ ಕಂಪನಿಯ ಸಿಇಒ ಜ್ಯಾಕ್ ಡಾರ್ಸೆ ಈಗ ಮತ್ತೊಂದು ಮಹತ್ವದ ತಂತ್ರಜ್ಞಾನ ಆವಿಷ್ಕಾರದೊಂದಿಗೆ ಮುಂಚೂಣಿಗೆ ಬಂದಿದ್ದಾರೆ. ಇಂಟರ್ನೆಟ್ ಅಥವಾ ಮೊಬೈಲ್ ನೆಟ್‌ವರ್ಕ್ ಇಲ್ಲದೆಯೂ ಸಂವಹನ ನಡೆಸಲು ಸಾಧ್ಯವಾಗುವ "ಬಿಟ್ಚಾಟ್" ಎಂಬ ಹೊಸ ಚಾಟ್ ಅಪ್ಲಿಕೇಶನ್ ಅನ್ನು ಅವರು ಅಭಿವೃದ್ಧಿಪಡಿಸಿದ್ದಾರೆ.

ರಾಷ್ಟ್ರೀಯ ಫುಟ್ಬಾಲ್ ದಿನ

ಪ್ರತಿ ವರ್ಷ ಜುಲೈ 19 ರಂದು ರಾಷ್ಟ್ರೀಯ ಫುಟ್‌ಬಾಲ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಅಮೆರಿಕನ್ ಫುಟ್‌ಬಾಲ್‌ನ ಶ್ರೀಮಂತ ಇತಿಹಾಸ, ಅದರ ಸಾಂಸ್ಕೃತಿಕ ಮಹತ್ವ ಮತ್ತು ಮುಂಬರುವ ಫುಟ್‌ಬಾಲ್ ಋತುವನ್ನು ಗೌರವಿಸುತ್ತದೆ.

ತೆರಿಗೆ ಇಲಾಖೆಯ ಬಿಗಿ ಕ್ರಮ: ಡಿಜಿಟಲ್ ಪಾವತಿ ವ್ಯಾಮೋಹದಿಂದ ನಗದು ವ್ಯವಹಾರಕ್ಕೆ ಮರಳಿದ ವ್ಯಾಪಾರಿಗಳು!

ಕೇಂದ್ರ ಸರ್ಕಾರದ 'ಅಚ್ಛೇ ದಿನ್' ಘೋಷಣೆಯೊಂದಿಗೆ ಡಿಜಿಟಲ್ ಇಂಡಿಯಾ ಕನಸು ಕಂಡಿದ್ದ ಸಣ್ಣ ವ್ಯಾಪಾರಿಗಳು ಇದೀಗ ತೆರಿಗೆ ಇಲಾಖೆಯ ಕಠಿಣ ಕ್ರಮಗಳಿಂದ ತತ್ತರಿಸಿದ್ದಾರೆ.