ಬಾಲಿವುಡ್ ಹಿರಿಯ ನಿರ್ದೇಶಕ ಎಂ.ಎಂ. ಬೇಗ್ ನಿಗೂಢ ಸಾವು: ಮನೆಯಲ್ಲಿ ಶವ ಪತ್ತೆ

Date:

spot_img

ಮುಂಬೈ: ಬಾಲಿವುಡ್ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ನಿರ್ದೇಶಕ ಎಂ.ಎಂ. ಬೇಗ್ ಅವರು ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮುಂಬೈನ ಮನೆಯಲ್ಲಿ ಅವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿತ್ರರಂಗದಲ್ಲಿ ಈ ಘಟನೆ ತೀವ್ರ ಆಘಾತ ಮೂಡಿಸಿದೆ.

ಬಾಲಿವುಡ್‌ನ ಖ್ಯಾತ ತಾಂತ್ರಿಕ ವರ್ಗದಲ್ಲಿ ಗುರುತಿಸಿಕೊಂಡಿದ್ದ ಎಂ.ಎಂ. ಬೇಗ್ ಅವರು ಕಳೆದ 4 ರಿಂದ 5 ದಿನಗಳಿಂದ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮನೆಯಿಂದ ಹೊರಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು, ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿಸಿದಾಗ ಬೇಗ್ ಅವರ ದೇಹವು ಅತೀ ಕೆಟ್ಟದಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಎಂದು ಅವರ ಆಪ್ತ ಹಾಗೂ ಪ್ರಚಾರಕ ಹನೀಫ್ ಜವೇರಿ ತಿಳಿಸಿದ್ದಾರೆ.

ಬಾಲ ಕಲಾವಿದೆ ಬೇಬಿ ಗುಡ್ಡು ಅವರ ತಂದೆಯೂ ಆಗಿರುವ ಬೇಗ್ ಅವರು, ಜೆ. ಓಂ ಪ್ರಕಾಶ್ ಮತ್ತು ರಾಕೇಶ್ ರೋಷನ್ ಅವರಂತಹ ಘಟಾನುಘಟಿಗಳ ಜೊತೆ ಸಹಾಯಕ ನಿರ್ದೇಶಕರಾಗಿ ವೃತ್ತಿ ಆರಂಭಿಸಿದ್ದರು. ‘ಜೈಸಿ ಕರ್ನಿ ವೈಸಿ ಭರ್ನಿ’, ‘ಕಾಲಾ ಬಜಾರ್’ ಮತ್ತು ‘ಕಿಶನ್ ಕನ್ಹಯ್ಯಾ’ ಅಂತಹ ಹಿಟ್ ಚಿತ್ರಗಳಲ್ಲಿ ಅವರು ಕೆಲಸ ಮಾಡಿದ್ದರು. ಸ್ವತಂತ್ರ ನಿರ್ದೇಶಕರಾಗಿ ನಾಸಿರುದ್ದೀನ್ ಶಾ ನಟನೆಯ ‘ಮಾಸೋಮ್ ಗವಾಹ್’ ಮತ್ತು ಶಿಲ್ಪಾ ಶಿರೋಡ್ಕರ್ ನಟನೆಯ ‘ಛೋಟಿ ಬಹು’ ಚಿತ್ರಗಳನ್ನು ನಿರ್ದೇಶಿಸಿದ್ದರು. ಪ್ರಸ್ತುತ ಪೊಲೀಸರು ಈ ನಿಗೂಢ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕರ್ನಾಟಕದಲ್ಲಿ ಇನ್‌ಫ್ಲುಯೆಂಜಾ ಜ್ವರದ ಭೀತಿ: ಆರೋಗ್ಯ ಇಲಾಖೆ ಅಲರ್ಟ್

ರಾಜ್ಯದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಸಾಂಕ್ರಾಮಿಕ ಇನ್‌ಫ್ಲುಯೆಂಜಾ ಜ್ವರ ಹೆಚ್ಚಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರದಿಂದಿರಲು ಸೂಚನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ರೋಹಿತ್ ಶರ್ಮಾ ನಿವೃತ್ತಿ ವದಂತಿಗೆ ಬ್ರೇಕ್, ಲಾರ್ಡ್ಸ್‌ನಲ್ಲಿ ಶತಕದ ದಾಖಲೆ

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ನಿವೃತ್ತಿ ವದಂತಿಗಳನ್ನು ತಳ್ಳಿಹಾಕಿದ ರೋಹಿತ್ ಶರ್ಮಾ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹಾಸನ ಬಸ್‌ನಲ್ಲಿ ಮಹಿಳಾ ಕಂಡಕ್ಟರ್-ಪ್ರಯಾಣಿಕಳ ಫೈಟ್ ವೈರಲ್

ಹಾಸನದಲ್ಲಿ ಮಹಿಳಾ ಕಂಡಕ್ಟರ್ ಹಾಗೂ ಪ್ರಯಾಣಿಕಳ ನಡುವೆ ಸೀಟಿಗಾಗಿ ನಡೆದ ಭೀಕರ ಜಗಳದ ವಿಡಿಯೋ ವೈರಲ್ ಆಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನಾರಾಯಣ ಗುರು ಜಯಂತಿ ಭಾಷಣ ಸ್ಪರ್ಧೆ 2026: ಉಡುಪಿಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆ

ಉಡುಪಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಭಾರಿ ನಗದು ಬಹುಮಾನವಿದೆ, ಪೂರ್ಣ ಮಾಹಿತಿ ಇಲ್ಲಿದೆ ಓದಿ.