
ಉಡುಪಿ (ಮಾರ್ಚ್.28): ಖಾಸಗಿ ಸ್ಥಳದಲ್ಲಿದ್ದ ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಗಂಡಸಿನ ಶವ ಪತ್ತೆಯಾಗಿದ್ದು, ಈ ವ್ಯಕ್ತಿ ಮೃತಪಟ್ಟಿದ್ದು ಎರಡು ತಿಂಗಳು ಕಳೆದಿರುವ ಶಂಕೆ ವ್ಯಕ್ತವಾಗಿದೆ.
ಶವವು ಸಂಪೂರ್ಣವಾಗಿ ಕೊಳೆಯಲು ಕಾರಣವಾಗಿ ಅಸ್ಥಿಪಂಜರ ಮಾತ್ರ ಉಳಿದಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗದೆ ಇರುವುದರಿಂದ ವಾರಸುದಾರರು ಉಡುಪಿ ನಗರ ಪೊಲೀಸ್ ಠಾಣೆಯ ನಾಗರೀಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಅಧಿಕಾರಿಗಳು ಸೂಚಿಸಿದ್ದಾರೆ.
ನಗರ ಪೊಲೀಸ್ ಠಾಣೆಯ ತನಿಖಾಧಿಕಾರಿ ಈರಣ್ಯ, ಎಎಸ್‌ಐ ಹರೀಶ್ ಹಾಗೂ ಜಾಸ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಸಮಾಜಸೇವಕ ನಿತ್ಯಾನಂದ ಒಳಕಾಡುವರು ಶವವನ್ನು ಮರದಿಂದ ಕೆಳಗಿಳಿಸಿ, ಟಾರ್ಪಾಲಿನಲ್ಲಿ ಭದ್ರಗೊಳಿಸಿ, ಉಚಿತ ಸೇವೆಯ ಆಂಬುಲೆನ್ಸ್ ಮೂಲಕ ಅಜ್ಜರಕಾಡು ಜಿಲ್ಲಾಸ್ಪತ್ರೆಯ ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಿ ಇಲಾಖೆಗೆ ನೆರವಾದರು.