
ತಮಿಳುನಾಡಿನ ಮನ್ನಾರ್ಗುಡಿ ರಾಜಗೋಪಾಲಸ್ವಾಮಿ ದೇವಸ್ಥಾನದ ಹೆಣ್ಮಾನ ಸಂಗಮಾಲಂ’ ತನ್ನ ವಿಶಿಷ್ಟ ಕೇಶ ವಿನ್ಯಾಸದಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದೆ. ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವ ಈ ಆನೆಯ ಹೆಸರೇ ಬಾಬ್-ಕಟ್ ಸೆಂಗಮಾಲಂ’!
ಇತ್ತೀಚೆಗೆ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಧಾ ರಾಮನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಂಗಮಾಲಂನ ಫೋಟೋ ಹಂಚಿಕೊಂಡಿದ್ದಾರೆ. “ತನ್ನ ವಿಶಿಷ್ಟ ಹೇರ್‌ಸ್ಟೈಲ್‌ನಿಂದ ಜನಪ್ರಿಯವಾಗಿರುವ ಈ ಆನೆ ತಮಿಳುನಾಡಿನ ಮನ್ನಾರ್ಗುಡಿ ಶ್ರೀ ರಾಜಗೋಪಾಲಸ್ವಾಮಿ ದೇವಾಲಯದಲ್ಲಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
2003ರಲ್ಲಿ ಕೇರಳದಿಂದ ಮನ್ನಾರ್ಗುಡಿಯ ರಾಜಗೋಪಾಲಸ್ವಾಮಿ ದೇವಸ್ಥಾನಕ್ಕೆ ಕರೆತರಲಾದ ಸಂಗಮಾಲಂನ ಮಾವುತ ಎಸ್. ರಾಜಗೋಪಾಲ್ ಈ ಆನೆಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವರು ಈ ವಿಶೇಷ ಕೇಶವಿನ್ಯಾಸ ಮಾಡಿ ಸಂಭ್ರಮಿಸುವುದು ಇದೀಗ ಎಲ್ಲರಿಗೂ ಕುತೂಹಲವನ್ನು ಹುಟ್ಟಿಸಿದೆ.