ಪಿಲಿಕುಳ ಉದ್ಯಾನ ತಾತ್ಕಾಲಿಕವಾಗಿ ಮುಚ್ಚುವಂತೆ BNHSನ ಪಿಐಎಲ್!

Date:

spot_img

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನದಲ್ಲಿ ನಿರ್ವಹಣಾ ಅವ್ಯವಸ್ಥೆ ಮತ್ತು ನಿಯಮ ಉಲ್ಲಂಘನೆಯ ಬಗ್ಗೆ ಗಂಭೀರ ಆರೋಪ ಕೇಳಿಬಂದಿದ್ದು, ಅಲ್ಲಿರುವ ಪ್ರಾಣಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ಹೈಕೋರ್ಟ್ ಮೊರೆ ಹೋಗಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಸಂಸ್ಥೆ, ನ್ಯಾಯಾಲಯದ ತೀರ್ಪು ಹೊರಬರುವವರೆಗೆ ಪಿಲಿಕುಳ ಉದ್ಯಾನವನವನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಕೋರುತ್ತಿದೆ. ಈ ಕುರಿತಂತೆ, ಮಂಗಳೂರು ಮೂಲದ ವನ್ಯಜೀವಿ ಸಂರಕ್ಷಣಾ ತಜ್ಞ ಭುವನ್ ಮತ್ತು ಹೈಕೋರ್ಟ್ ವಕೀಲ ಅಶ್ವಿನ್ ಜಾಯ್‌ಸ್ಟನ್ ಕುಟಿನ್ಹ ಕಳೆದ ಅಕ್ಟೋಬರ್ 31 ರಂದು ಅಧ್ಯಯನ ನಡೆಸಿದ್ದರು. ಪಿಲಿಕುಳ ಉದ್ಯಾನದಲ್ಲಿನ ಪ್ರಾಣಿಗಳ ಪಂಜರಗಳು ಕೇಂದ್ರ ಮೃಗಾಲಯ ಪ್ರಾಧಿಕಾರದ ನಿಯಮಾವಳಿಗಳಿಗೆ ಅನುಗುಣವಿದೆಯೇ ಎಂಬುದನ್ನು ಪರಿಶೀಲಿಸಿ, ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೇಳಿದರೂ, ಸರಿಯಾದ ಮಾಹಿತಿ ದೊರಕಿಲ್ಲ.

ಈ ಕುರಿತು ಕೇಂದ್ರ ಮೃಗಾಲಯ ಪ್ರಾಧಿಕಾರ, ಮುಖ್ಯ ವನ್ಯಜೀವಿ ವಾರ್ಡನ್ ಮತ್ತು ಅರಣ್ಯ ಇಲಾಖೆ ಪ್ರಧಾನ ಸಂರಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದ್ದರೂ, ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಲಾಗಿದೆ ಎಂದು BNHS ಸಂಸ್ಥೆ ಪ್ರಕಟಣೆ ನೀಡಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪರ್ಕಳ ಶಿಶು ಸ್ಪರ್ಧೆ ಮತ್ತು ತಾಯಿ ಮಗುವಿನ ಆರೋಗ್ಯ ಶಿಬಿರ 2026

ಪರ್ಕಳದಲ್ಲಿ ನಡೆದ ತಾಯಿ-ಮಗುವಿನ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಾಗೂ ಮಕ್ಕಳ ಶಿಶು ಸ್ಪರ್ಧೆ 2026 ರ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳ ಮಾಳ ಬಳಿ ಸರಣಿ ಅಪಘಾತ: 3 ಕಾರು ಜಖಂ

ಕಾರ್ಕಳ ಮಾಳ ಚೆಕ್ ಪೋಸ್ಟ್ ಬಳಿ ಹೆದ್ದಾರಿಯಲ್ಲಿ ಆಯಿಲ್ ಲೀಕ್ ಆಗಿ 3 ಕಾರುಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಚೆನ್ನಮ್ಮ ದೇವೇಗೌಡ ನಿಧನ: ಡಾ ಮಂಜುನಾಥ್ ಭಾವುಕ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ರಿಯೇಟಿವ್ ಪುಸ್ತಕಧಾರೆ 2026: ಕಾರ್ಕಳದಲ್ಲಿ 25 ಕೃತಿಗಳ ಬಿಡುಗಡೆ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕಧಾರೆ 2026 ಕಾರ್ಯಕ್ರಮ ಸಡಗರದಿಂದ ಜರುಗಿದ್ದು, ಒಟ್ಟು 25 ಕೃತಿಗಳು ಲೋಕಾರ್ಪಣೆಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.