
ಕಾರ್ಕಳ : ರಕ್ತದಾನವು ನಾವು ಮಾಡುವಂತಹ ಅತ್ಯಂತ ಪುಣ್ಯದ ಕಾರ್ಯ. ನಾವು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಆರೋಗ್ಯವಂತರಾಗಿರಬಹುದು ಎಂದು ವಿಧಾನಪರಿಷತ್ ನ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಅವರು ಎಳ್ಳಾರೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಐಎಎಸ್ ಅಧಿಕಾರಿ ಸದಾಶಿವ ಪ್ರಭು ಎಳ್ಳಾರೆ, ಮಂಗಳೂರು ವಿಭಾಗ ಗ್ರಾಮ ವಿಕಾಸ ಟೋಳಿ ಸದಸ್ಯೆ ರಮಿತಾ ಶೈಲೇಂದ್ರ, ಕಡ್ತಲ ಗ್ರಾ.ಪಂ ಅಧ್ಯಕ್ಷರಾದ ಸುಕೇಶ್ ಹೆಗ್ಡೆ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್, ವೈದ್ಯ ಡಾ|ಪ್ರಮೋದ್ ಕುಮಾರ್ ಹೆಗ್ಡೆ, ಮುನಿಯಾಲಿನ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸಂದೇಶ್ ಶೆಟ್ಟಿ, ಶ್ರೀ ಜನಾರ್ದನ ಟ್ರಸ್ಟ್ ಅಧ್ಯಕ್ಷರಾದ ಪ್ರಸನ್ನ ಶೆಟ್ಟಿ ಮುಂಡಾರು, ಉದ್ಯಮಿ ದಿನೇಶ್ ಕಿಣಿ, ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆಯ ಸಂಸ್ಥಾಪಕರಾದ ದೇವೇಂದ್ರ ಕಾಮತ್, ಅಧ್ಯಕ್ಷೆ ಶಾಂತಿ ಪ್ರಭು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಂತಿ ಪ್ರಭುರವರು ಸ್ವಾಗತಿಸಿ , ಹರೀಶ್ ಶೆಟ್ಟಿಯವರು ಧನ್ಯವಾದವಿತ್ತರು. ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಈ ರಕ್ತದಾನ ಶಿಬಿರದಲ್ಲಿ 104 ಜನರು ರಕ್ತದಾನವನ್ನು ಮಾಡಿದರು.