ಉಗ್ರರ ಹೇಯ ಕೃತ್ಯ ಬ್ಲಾಕ್‌ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ – ಶುಭದರಾವ್

Date:

spot_img

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ದುರಾದೃಷ್ಟಕರ, ಈ ದಾಳಿಯನ್ನು ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತಾ ದಾಳಿಯಲ್ಲಿ ಮಡಿದ ಕರ್ನಾಟಕದ ಇಬ್ಬರು ಸೇರಿ ಇತರ ಸಹೋದರರಿಗೆ ಶೃದ್ದಾಂಜಲಿಯನ್ನು ಸಲ್ಲಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ತಿಳಿಸಿದ್ದಾರೆ.

ಉಗ್ರರ ದಮನಕ್ಕೆ ಕೇಂದ್ರ ಸರಕಾರ ತಕ್ಷಣ‌ ಕಾರ್ಯ ಪ್ರವ್ರತವಾಗಬೇಕು ಸರಕಾರ ತೆಗೆದುಕೊಳ್ಳುವ ಯಾವುದೇ ಕಾನೂನಾತ್ಮಕ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಆದರೆ ಸರಕಾರದ ವೈಫಲ್ಯವನ್ನು ಮೆರೆ ಮಾಚಲು ಸಾದ್ಯವಿಲ್ಲ ಗಡಿಯಲ್ಲಿ ಉಗ್ರರ ದಾಳಿಯನ್ನು ತಡೆಯಲು ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ, ಇದು ಗೃಹ ಇಲಾಖೆಯ ಗಂಭೀರ ವೈಫಲ್ಯವನ್ನು ತೋರಿಸುತ್ತದೆ.‌ 2000 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಒಂದೇ ಕಡೆ ಸೇರಿದ್ದರೂ ಒಬ್ಬನೇ ಒಬ್ಬ ಭದ್ರತಾ ಸಿಬಂದಿ ಇಲ್ಲದಿರುವುದು ಭದ್ರತಾ ಲೋಪವಲ್ಲದೆ ಬೇರೇನೂ ಅಲ್ಲ, ಇವರ ಆರ್ಭಟ ಆಕ್ರೋಶಗಳು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಯಿತು ಎಂದೆನಿಸುತ್ತದೆ ಬೇರೆ ಸರಕಾರಗಳು ಆಡಳಿತ ನಡೆಸುವಾಗ ಉಗ್ರರ ದಾಳಿಗಳಾದಾಗ ರಾಜೀನಾಮೆ ಕೇಳುತ್ತಿದ್ದವರು ಮೌನವಾಗಿದ್ದಾರೆ ಎಂದರು.

ಸುರಕ್ಷತಾ ಲೋಪಗಳಿಗೆ ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಉತ್ತರಿಸಬೇಕು ಪ್ರಧಾನಿಯವರ 56 ಇಂಚಿನ ಎದೆಯ ಶಕ್ತಿ ಏನೆಂಬುದು ದೇಶಕ್ಕೆ ತೋರಿಸುವ ಕಾಲ ಬಂದಿದೆ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅಕ್ರಮ: ದೆಹಲಿಯಲ್ಲಿ ಬೃಹತ್ ಪ್ರತಿಭಟನೆ, ರಾಹುಲ್ ಗಾಂಧಿಗೆ ಗಾಯ

ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯಲ್ಲಿ ಪ್ರತಿಪಕ್ಷಗಳ ಬೃಹತ್ ಪ್ರತಿಭಟನೆ. ರಾಹುಲ್ ಗಾಂಧಿಗೆ ಗಾಯ, ಹಲವು ನಾಯಕರ ವಶ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಗೃಹಲಕ್ಷ್ಮಿ ಹಣ ಬರದೆ ಬೇಸತ್ತ ಪತಿ ಪ್ರತಿಭಟನೆ: ಸಿಎಂಗೆ ಪತ್ರ

ಗೃಹಲಕ್ಷ್ಮಿ ಯೋಜನೆ ಹಣ ಜಮೆಯಾಗದೆ ಕೊಪ್ಪಳದಲ್ಲಿ ಪತಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಮಿತಾಬ್ ಬಚ್ಚನ್ ಆರೋಗ್ಯ ಕುರಿತ ವದಂತಿಗಳಿಗೆ ತೆರೆ! ಬಿಗ್ ಬಿ ಸ್ಪಷ್ಟನೆ

ಅಮಿತಾಬ್ ಬಚ್ಚನ್ ಅವರ ಆರೋಗ್ಯದ ಕುರಿತು ಹಬ್ಬಿದ್ದ ಶಸ್ತ್ರಚಿಕಿತ್ಸೆಯ ವದಂತಿಗಳಿಗೆ ನಟ ಸ್ವತಃ ತೆರೆ ಎಳೆದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಧರ್ಮಸ್ಥಳ ಪ್ರಕರಣ: ಮಾಸ್ಕ್ ಮ್ಯಾನ್ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್

ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಹೈಕೋರ್ಟ್ ಅರ್ಜಿ ಇತ್ಯರ್ಥಪಡಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ