
ಉಡುಪಿ : ಭಾರತೀಯ ಜನಸಂಘದ ಸಂಸ್ಥಾಪಕ ಹಾಗೂ ಪ್ರಥಮ ಅಧ್ಯಕ್ಷ ಡಾ! ಶಾಮಪ್ರಸಾದ್ ಮುಖರ್ಜಿ ‘ಬಲಿದಾನ ದಿವಸ್’ ಪ್ರಯುಕ್ತ ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್ ನೇತೃತ್ವದಲ್ಲಿ ನಗರ ಕಾರ್ಯಾಲಯದಲ್ಲಿ ಡಾ! ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಗಳಾದ ಸತ್ಯಾನಂದ ನಾಯಕ್, ಶಿವಕುಮಾರ್ ಅಂಬಲಪಾಡಿ, ಪ್ರಮುಖರಾದ ವಿಜಯ್ ಭಟ್ ಕಡೆಕಾರ್, ಲೋಕಯ್ಯ ಪಣಿಯಾಡಿ, ಜಯಕರ್ ಸನಿಲ್, ಕಿಶೋರ್ ಕರಂಬಳ್ಳಿ, ಗುರುರಾಜ್, ಅಶೋಕ್ ನಾಯ್ಕ್, ಚಂದ್ರಶೇಖರ ಪ್ರಭು ಮತ್ತಿತರರು ಉಪಸ್ಥಿತರಿದ್ದರು.