
ನವದೆಹಲಿ: ಬಿಜೆಪಿ(BJP) ತನ್ನ ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ಶೀಘ್ರದಲ್ಲೇ ಆಯ್ಕೆ ಮಾಡುವ ಸಾಧ್ಯತೆ ಇದೆ. ಪ್ರಸ್ತುತ ಅಧ್ಯಕ್ಷ ಜೆ.ಪಿ. ನಡ್ಡಾ (J P Nadda) ಅವರನ್ನು ಪ್ರಧಾನಿ ನರೇಂದ್ರ ಮೋದಿ(PM Modi) ಸಂಪುಟಕ್ಕೆ ಸೇರಿಸಿದ ನಂತರ, ಪಕ್ಷವು ಕಳೆದ ವರ್ಷದಿಂದ ಹೊಸ ನಾಯಕನನ್ನು ಹುಡುಕುತ್ತಿದೆ ಎಂದು ವರದಿಯಾಗಿದೆ.
NDTV ವರದಿ ಪ್ರಕಾರ, ಏಪ್ರಿಲ್ 4ರಂದು ಮುಂಗಾರು ಅಧಿವೇಶನ ಮುಗಿದ ಬಳಿಕ ಈ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ. ಪಕ್ಷವು 13 ರಾಜ್ಯಗಳ ಅಧ್ಯಕ್ಷರನ್ನೂ ಆಯ್ಕೆ ಮಾಡಲಿದ್ದು, ಉತ್ತರ ಪ್ರದೇಶ(UP), ಕರ್ನಾಟಕ(Karnataka), ತಮಿಳುನಾಡು(Tamil Nadu), ಪಶ್ಚಿಮ ಬಂಗಾಳ(West Bengal) ಮೊದಲಾದ ರಾಜ್ಯಗಳ ಹೊಸ ರಾಜ್ಯಾಧ್ಯಕ್ಷರ ಘೋಷಣೆಯೂ ಸಾಧ್ಯ ಎಂದು ವರದಿ ತಿಳಿಸಿದೆ.
ಅಧ್ಯಕ್ಷ ಸ್ಥಾನಕ್ಕೆ ಪ್ರಮುಖ ಹೆಸರುಗಳು: ಮನೋಹರ್ ಲಾಲ್ ಖಟ್ಟರ್, ಪ್ರಹ್ಲಾದ್ ಜೋಶಿ , ಧರ್ಮೇಂದ್ರ ಪ್ರಧಾನ್ , ಅರ್ಜುನ್ ರಾಮ್ ಮೇಘವಾಲ್
ಪಕ್ಷವು ಇನ್ನೂ ಅಧಿಕೃತವಾಗಿ ಉಮೇದುವಾರಿಕೆ ದೃಢಪಡಿಸಿಲ್ಲ ಅಥವಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಿಲ್ಲ ಎಂದು ವರದಿ ತಿಳಿಸಿದೆ. ಎಲ್ಲಾ ಪ್ರಕ್ರಿಯೆಗಳು ಏಪ್ರಿಲ್ 15ರೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.