spot_img

ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ‘ಯಕ್ಷ ಗುರು’ ಬನ್ನಂಜೆ ಸಂಜೀವ ಸುವರ್ಣರಿಗೆ ಗೌರವಾರ್ಪಣೆ

Date:

spot_img

ಉಡುಪಿ : ಶ್ರೀ ಗುರು ಪೂರ್ಣಿಮಾ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ಉಡುಪಿ ನಗರಾಧ್ಯಕ್ಷ ಶ್ರೀವತ್ಸರವರ ನೇತೃತ್ವದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ಖ್ಯಾತ ಯಕ್ಷ ಗುರು, ಉಡುಪಿಯ ‘ಯಕ್ಷ ಸಂಜೀವ ಯಕ್ಷಗಾನ ಕೇಂದ್ರ’ದ ಮುಖ್ಯಸ್ಥರಾದ ಬನ್ನಂಜೆ ಸಂಜೀವ ಸುವರ್ಣ ಅವರನ್ನು ಅವರ ನಿವಾಸದಲ್ಲಿ ಗೌರವಿಸಿ ಗುರು ವಂದನೆ ಸಲ್ಲಿಸಲಾಯಿತು.

ಸಂಜೀವ ಸುವರ್ಣ ಅವರು ಯಕ್ಷಗಾನದ ಹಲವಾರು ಪ್ರಕಾರಗಳಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ್ದು ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ತರಬೇತಿಯನ್ನು ನೀಡಿರುತ್ತಾರೆ. ಪ್ರತಿಭಾನ್ವಿತ ಯಕ್ಷಗಾನ ಕಲಾವಿದರಾಗಿ 30ಕ್ಕೂ ಹೆಚ್ಚು ದೇಶಗಳಲ್ಲಿ ಯಶಸ್ವೀ ಪ್ರದರ್ಶನವನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಯಕ್ಷಗಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಜೀವ ಸುವರ್ಣರು ಯಕ್ಷಗಾನದ ಗುರು-ಶಿಷ್ಯ ಪರಂಪರೆಯನ್ನು ಎತ್ತಿಹಿಡಿಯುತ್ತಲೇ ಯಕ್ಷಗಾನದ ಆಧುನಿಕ ರೂಪಾoತರಗಳಿಗೆ ಹೆಸರುವಾಸಿಯಾಗಿದ್ದಾರೆ. ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಮತ್ತು ಮಾನಸಿಕ ಅಸ್ವಸ್ಥ ಮಕ್ಕಳಿಗೂ ಯಕ್ಷಗಾನ ಕಲಿಸಿರುವುದು ಅವರ ಯಕ್ಷ ಕಲಾ ನೈಪುಣ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈ ಸಂದರ್ಭದಲ್ಲಿ ನಗರ ಯುವ ಮೋರ್ಚಾ ಉಪಾಧ್ಯಕ್ಷ ಪ್ರಜ್ವಲ್ ಪೂಜಾರಿ, ಸಂದರ್ಶ ಆಚಾರ್ಯ, ಪ್ರಣವ್ ಕಾಮತ್, ಪ್ರಧಾನ ಕಾರ್ಯದರ್ಶಿ ನಿತಿನ್ ಪೈ ಮಣಿಪಾಲ, ಕಾರ್ಯದರ್ಶಿಗಳಾದ ದೀಕ್ಷಿತ್ ಶೆಟ್ಟಿ, ನಿಕಿಲ್ ಮಡಿವಾಳ, ಹರ್ಷ ಆಚಾರ್ಯ, ಭೂಷಣ್ ಕುಮಾರ್ ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಗವದ್ಗೀತೆ ಪ್ರಚಾರಕಿ ಮೀನಾಕ್ಷಿ ಪೈ ಅವರಿಗೆ ಬಿಜೆಪಿ ನಗರ ಯುವ ಮೋರ್ಚಾದ ವತಿಯಿಂದ ಗೌರವಾರ್ಪಣೆ

ಮೀನಾಕ್ಷಿ ಪೈ ಅವರನ್ನು ಶ್ರೀ ಗುರು ಪೂರ್ಣಿಮಾ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ಉಡುಪಿ ನಗರಾಧ್ಯಕ್ಷ ಶ್ರೀವತ್ಸ ಅವರ ನೇತೃತ್ವದಲ್ಲಿ ಗೌರವಿಸಿ ಗುರು ವಂದನೆ ಸಲ್ಲಿಸಲಾಯಿತು.

‘ನ್ಯಾಷನಲ್ ಕ್ರಶ್’ ಅನಿರೀಕ್ಷಿತ ಪಾತ್ರದಲ್ಲಿ : ರಶ್ಮಿಕಾ ಮಂದಣ್ಣ ನಿರ್ಧಾರಕ್ಕೆ ಅಚ್ಚರಿ!

ತಮ್ಮ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ, ಇದೀಗ ಮುಂಬರುವ ಹೈ- ಆಕ್ಷನ್ ಎಂಟರ್‌ಟೈನರ್ 'AA22XA6' ಚಿತ್ರದಲ್ಲಿ ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಮುದ್ರಾಡಿ ಪ್ರೌಢಶಾಲೆಯಲ್ಲಿ “ಇಳೆಗೈಸಿರಿ” ವನಮಹೋತ್ಸವ ಕಾರ್ಯಕ್ರಮ

ಮುದ್ರಾಡಿ ಎಂ. ಎನ್.ಡಿ. ಎಸ್. ಎಂ.ಅನುದಾನಿತ ಪ್ರೌಢಶಾಲೆಯ ಕಲ್ಪನಾ ಪರಿಸರ ಸಂಘ ಮತ್ತು ಹೆಬ್ರಿ ಅರಣ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ನಡೆದ "ಇಳೆಗೈಸಿರಿ" ವನಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿ ಮಗುವಿನ ಮನೆಗೊಂದು ಗಿಡವನ್ನು ವಿತರಿಸಲಾಯಿತು.

ಡಾರ್ಕ್ ಅಂಡರ್‌ಆರ್ಮ್ಸ್ ಸಮಸ್ಯೆಯೇ? ಕಪ್ಪಾದ ಕಂಕುಳನ್ನು ಬೆಳ್ಳಗಾಗಿಸಲು ಇಲ್ಲಿದೆ ಸುಲಭ ಮನೆಮದ್ದುಗಳು!

ಕಪ್ಪಾದ ಕಂಕುಳನ್ನು ಬೆಳ್ಳಗಾಗಿಸಲು ಕೆಲವು ಸುಲಭ ಮನೆಮದ್ದುಗಳನ್ನು ಬಳಸಬಹುದು.