ಉಡುಪಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ

Date:

spot_img

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಶೈಲಿಯನ್ನು ತೀವ್ರವಾಗಿ ಟೀಕಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, “ಬಂಡಾಟ, ಗೂಂಡಾಗಿರಿ ಹೆಚ್ಚು ದಿನ ನಡೆಯುವುದಿಲ್ಲ. ಕಾಂಗ್ರೆಸ್ ಪುಢಾರಿಗಳಿಗೆ ಬಡ್ಡಿ ಸಮೇತ ಉತ್ತರ ನೀಡುವ ಕಾಲ ಬಂದೇ ಬರುತ್ತದೆ,” ಎಂದು ಎಚ್ಚರಿಸಿದರು. ಗುರುವಾರ (ಏ.10) ಉಡುಪಿಯಲ್ಲಿ ನಡೆದ ‘ಜನಾಕ್ರೋಶ ಯಾತ್ರೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ತೀವ್ರ ವಾಗ್ದಾಳಿ ನಡೆಸಿದರು. ಕಲ್ಸಂಕದಿಂದ ಆರಂಭಗೊಂಡ ಯಾತ್ರೆ, ಉಡುಪಿ ಕಡಿಯಾಳಿಯಲ್ಲಿರುವ ಬಿಜೆಪಿ ಕಚೇರಿಯ ಮುಂದೆ ನಡೆದ ಬೃಹತ್ ಸಮಾವೇಶದೊಂದಿಗೆ ಮುಕ್ತಾಯವಾಯಿತು.

ವಿಜಯೇಂದ್ರ ಅವರು ರಾಜ್ಯ ಸರ್ಕಾರದ ನೀತಿಗಳನ್ನು ತೀವ್ರವಾಗಿ ಟೀಕಿಸಿ, “ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ, ಬೆಲೆ ಏರಿಕೆ, ಆರ್ಥಿಕ ಹಿನ್ನಡೆ, ದುಷ್ಕರ್ಮಿಗಳಿಗಾಗುತ್ತಿರುವ ರಕ್ಷಣೆ ಹಾಗೂ ಸರ್ಕಾರದ ದುರಾಡಳಿತದ ವಿರುದ್ಧ ಜನರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ , ಸರ್ಕಾರದ ವಿರುದ್ಧ ಜನರ ಹೋರಾಟ ಶುರುವಾಗಿದೆ. ಬಿಜೆಪಿಯ ಈ ಯಾತ್ರೆ ಜನರ ನೋವನ್ನು ತೋರುವ ಧ್ವನಿಯಾಗಿ ಕೆಲಸ ಮಾಡುತ್ತಿದೆ” ಎಂದು ಹೇಳಿದರು. ಹಾಗೆಯೇ ಜನತೆಗೆ ನಿಷ್ಠಾವಂತ ಆಡಳಿತ ನೀಡಬೇಕಾದ ಸರ್ಕಾರವೇ ಈಗ ಜನರ ಆಕ್ರೋಶಕ್ಕೆ ಗುರಿಯಾಗಿರುವುದನ್ನೂ ಉಲ್ಲೇಖಿಸಿದರು.

ಈ ಯಾತ್ರೆಯಲ್ಲಿ ಜಿಲ್ಲೆಯ ಹಲವಾರು ಕ್ಷೇತ್ರಗಳಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಹಿಳೆಯರೇ ಎಚ್ಚರ..! ರಾತ್ರಿ 11 ದಾಟಿದ್ರೂ ನಿದ್ರೆ ಮಾಡಲ್ವಾ? ನಿಮಗಾಗಿ ಕಾಯ್ತಿದೆ ಈ ದೊಡ್ಡ ಕಾಯಿಲೆ

ಮಹಿಳೆಯರು ರಾತ್ರಿ 11 ಗಂಟೆಯೊಳಗೆ ಮಲಗುವುದು ಏಕೆ ಮುಖ್ಯ? ತಡವಾಗಿ ನಿದ್ರಿಸುವುದರಿಂದ ಹಾರ್ಮೋನ್ ಅಸಮತೋಲನ ಮತ್ತು ಸಂತಾನೋತ್ಪತ್ತಿ ಸಮಸ್ಯೆ ಹೇಗೆ ಕಾಡುತ್ತದೆ ಎಂದು ತಿಳಿಯಿರಿ.

ಹೈದರಾಬಾದ್ ಮೀನು ಪ್ರಸಾದಕ್ಕೆ ಹರಿದುಬಂದ ಜನಸಾಗರ

ಹೈದರಾಬಾದ್‌ನಲ್ಲಿ ಅಸ್ತಮಾ ನಿವಾರಣೆಯ ಸಾಂಪ್ರದಾಯಿಕ ಮೀನು ಪ್ರಸಾದ ವಿತರಣೆಗೆ ಲಕ್ಷಾಂತರ ಜನರು ಆಗಮಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನಟ ಗಗನ್ ಚಿನ್ನಪ್ಪ ಲವ್ ಸ್ಟೋರಿ ಬ್ರೇಕಪ್ ಸೀಕ್ರೆಟ್ಸ್

ನಟ ಗಗನ್ ಚಿನ್ನಪ್ಪ ತಮ್ಮ ಮೊದಲ ಪ್ರೀತಿಯಲ್ಲಿ ಎದುರಿಸಿದ ವಂಚನೆ ಹಾಗೂ ಆರ್ಥಿಕ ನಷ್ಟದ ಕಹಿಸತ್ಯ ಬಿಚ್ಚಿಟ್ಟಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಮೈಸೂರು ದುರಂತ: 2 ಮಕ್ಕಳ ಹತ್ಯೆ ಬಳಿಕ ತಾಯಿ ಆತ್ಮಹತ್ಯೆಗೆ ಯತ್ನ

ಮೈಸೂರಿನಲ್ಲಿ ತಾಯಿ ತನ್ನ 2 ಪುಟ್ಟ ಮಕ್ಕಳನ್ನು ಹತ್ಯೆಗೈದು ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ