spot_img

ಭೀಕರ ಸುಂಟರಗಾಳಿಯಿಂದ ಕಾಪು ಮತ್ತು ಕಾರ್ಕಳ ತಾಲೂಕಿನಾದ್ಯಂತ ಆಗಿರುವ ಹಾನಿಗೆ ತುರ್ತು ಪರಿಹಾರ ಒದಗಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಗ್ರಹ

Date:

spot_img

ಉಡುಪಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದರಂಗಡಿ ಗ್ರಾ.ಪಂ. ವ್ಯಾಪ್ತಿಯ ಪಿಲಾರು ಮತ್ತು ಕಾರ್ಕಳ ತಾಲೂಕಿನ ಬೆಳ್ಮಣ್, ನಂದಳಿಕೆ, ಸೂಡ, ರೆಂಜಾಳ, ಬೈಲೂರು, ಯರ್ಲಪಾಡಿ ಮುಂತಾದ ಪ್ರದೇಶಗಳಲ್ಲಿ ಆ.18ರಂದು ಬೀಸಿದ ಬೀಕರ ಸುಂಟರ ಗಾಳಿಯಿಂದ ಸುಮಾರು ಒಂದೂವರೆ ಕಿ.ಮೀ. ಅಗಲ ಹಾಗೂ ಏಳೆoಟು ಕಿ.ಮೀ. ಉದ್ದಕ್ಕೆ ಸಾಲು ಸಾಲು ಮರಗಳು ಉರುಳಿ ಬಿದ್ದು ಅನೇಕ ಮನೆಗಳು ಮತ್ತು ಆಸ್ತಿ ಪಾಸ್ತಿಗೆ ಅಪಾರ ಹಾನಿ ಸಂಭವಿಸಿದ್ದು, ಸದ್ರಿ ಪ್ರಕೃತಿ ವಿಕೋಪವನ್ನು ಜಿಲ್ಲೆಯ ವಿಶೇಷ ಪ್ರಕರಣವೆಂದು ಪರಿಗಣಿಸಿ ಆದ್ಯತೆ ಮೇರೆಗೆ ತುರ್ತು ಪರಿಹಾರವನ್ನು ಒದಗಿಸುವಂತೆ, ಸ್ಥಳಕ್ಕೆ ಬೇಟಿ ನೀಡಿರುವ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾರ್ಕಳ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಬೆಳ್ಮಣ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಲ್ಲಿಯೂ ಸದ್ರಿ ಪ್ರಕರಣವನ್ನು ಆದ್ಯತೆ ಮೇರೆಗೆ ಪರಿಗಣಿಸಿ ತುರ್ತು ಅನುದಾನವನ್ನು ಮಂಜೂರು ಮಾಡುವರೆ ಶಿಫಾರಸು ಮಾಡುವಂತೆ ಅವರು ಒತ್ತಾಯಿಸಿದರು.

ಇದರೊಂದಿಗೆ ಹಲವಾರು ವಿದ್ಯುತ್ ಕಂಬಗಳು ಕೂಡಾ ಧರಾಶಾಯಿಯಾಗಿದ್ದು, ಸಂಬಂಧಪಟ್ಟ ಇಲಾಖೆ ಮೂಲಕ ತುರ್ತು ಪರಿಹಾರ ಮಾರ್ಗೋಪಾಯವನ್ನು ಒದಗಿಸುವಂತೆ ಕುತ್ಯಾರು ಮನವಿ ಮಾಡಿದ್ದಾರೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ, ಪಕ್ಷದ ಪ್ರಮುಖರಾದ ಶಿವರಾಮ ಭಂಡಾರಿ ಸಹಿತ ಸ್ಥಳೀಯರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ: ಸಾರ್ವಜನಿಕ ಅಹವಾಲು ಸ್ವೀಕಾರ ವೇಳೆ ಭದ್ರತಾ ಲೋಪ

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸದಲ್ಲಿ ಬುಧವಾರ ನಡೆದ 'ಜನ್ ಸುನ್ವಾಯಿ' (ಸಾರ್ವಜನಿಕ ಅಹವಾಲು ಸ್ವೀಕಾರ) ಕಾರ್ಯಕ್ರಮದ ಸಂದರ್ಭದಲ್ಲಿ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ.

ಬೆಂಗಳೂರಿನಲ್ಲಿ 5 ಕೋಟಿ ರೂ. ಡ್ರಗ್ಸ್ ಸೀಜ್: ಆಫ್ರಿಕಾ ಮೂಲದ ಇಬ್ಬರ ಬಂಧನ

ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಿರುವ ಪೊಲೀಸರು, ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು, ಆಫ್ರಿಕಾ ಮೂಲದ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.

ಜೆಸಿಐ ಕಾರ್ಕಳ ರೂರಲ್ ವತಿಯಿಂದ ವಲಯ ನಿರ್ದೇಶಿತ ಆರೋಹಣ ವ್ಯಕ್ತಿತ್ವ ವಿಕಸನಕ್ಕೆ ತರಬೇತಿಗಳ ಸಪ್ತಾಹದ ಹೂರಣ

ಜೆಸಿಐ ಕಾರ್ಕಳ ರೂರಲ್ ವತಿಯಿಂದ ವಲಯ ನಿರ್ದೇಶಿತ ಆರೋಹಣ ವ್ಯಕ್ತಿತ್ವ ವಿಕಸನಕ್ಕೆ ತರಬೇತಿಗಳ ಸಪ್ತಾಹದ ಹೂರಣ ಇದರ ಅಂಗವಾಗಿ ಆಹಾರ - ವಿಹಾರ , ಆಚಾರ - ವಿಚಾರಗಳ ಮೂಲಕ ವ್ಯಕ್ತಿತ್ವ ನಿರ್ಮಾಣ ಮತ್ತು ಚಟುವಟಿಕೆಗಳ ಮೂಲಕ ನಾಯಕತ್ವ ಕೌಶಲ್ಯ ವಿಕಸನ ಕುರಿತ ಮೊದಲ ವಿಶೇಷ ತರಬೇತಿ ಕಾರ್ಯಕ್ರಮ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು , ಕಾಬೆಟ್ಟು ಕಾರ್ಕಳ ಇಲ್ಲಿ ಯಶಸ್ವಿಯಾಗಿ ನಡೆಯಿತು.

ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ನಟಿ ರಕ್ಷಿತಾ ಭೇಟಿ

ಪ್ರಸಿದ್ಧ ನಟಿ ರಕ್ಷಿತಾ ಪ್ರೇಮ್ ಅವರು ಇಂದು ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.