
ಫೆಬ್ರವರಿ.11, ಭಾರತೀಯ ಜನ ಸಂಘದ ಸಂಸ್ಥಾಪಕದಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಬಲಿದಾನ ದಿನ. ರಾಜಕೀಯ ಕ್ಷೇತ್ರದಲ್ಲಿ ಸಚ್ಚಾರಿತ್ರ್ಯ, ದೇಶಭಕ್ತಿ, ಧ್ಯೇಯವಾದ, ಏಕಾತ್ಮ ಮಾನವತಾವಾದ ಹಾಗೂ ಉನ್ನತ ರಾಜಕೀಯ ಮೌಲ್ಯಗಳಿಗೆ ಮೇಲ್ಪಂಕ್ತಿಯಾಗಿ ಇಂದಿಗೂ ಪ್ರೇರಣೆ ನೀಡುತ್ತಿರುವ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಸ್ಮರಣೆಯಲ್ಲಿ ಫೆಬ್ರವರಿ.11ನ್ನು ಬಿಜೆಪಿ ವತಿಯಿಂದ ‘ಸಮರ್ಪಣಾ ದಿನ’ವನ್ನಾಗಿ ಆಚರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ನಾಳೆ ಫೆಬ್ರವರಿ.11 ಮಂಗಳವಾರ ಬೆಳಿಗ್ಗೆ ಗಂಟೆ 10.00ಕ್ಕೆ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ‘ಪುಷ್ಪಾರ್ಚನೆ’, ಬಿಜೆಪಿ ಚಟುವಟಿಕೆಗೆ ‘ಸಮರ್ಪಣಾ ನಿಧಿ ಅರ್ಪಣೆ’ ಹಾಗೂ ‘ಉಪನ್ಯಾಸ’ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಬಿಜೆಪಿ ರಾಜ್ಯ ಪದಾಧಿಕಾರಿಗಳು, ಜಿಲ್ಲಾ-ಮೋರ್ಚಾ-ಪ್ರಕೋಷ್ಠ-ಮಂಡಲಗಳ ಸಹಿತ ಎಲ್ಲಾ ಸ್ತರದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಕಾರ್ಯಕಾರಿಣಿ ಸದಸ್ಯರು, ನಗರಸಭಾ ಸದಸ್ಯರ ಸಹಿತ ಎಲ್ಲಾ ಸ್ತರದ ಜನಪ್ರತಿನಿಧಿಗಳು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.