
ಉಡುಪಿ, ಅಂಬಲಪಾಡಿ: ಬಿಲ್ಲವ ಸೇವಾ ಸಂಘ (ರಿ.), ಶ್ರೀ ವಿಠೋಬ ಭಜನಾ ಮಂದಿರದ 2024-25ರ ವಾರ್ಷಿಕ ಮಹಾ ಸಭೆಯಲ್ಲಿ ಶಿವದಾಸ್ ಪಿ. ಅವರನ್ನು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಆ.10ರಂದು ನಡೆದ ಈ ಸಭೆಯು ಮುಂದಿನ 2 ವರ್ಷಗಳ ಅವಧಿಗೆ (2025-27) ಸಂಘದ ಆಡಳಿತ ಸಮಿತಿಯನ್ನು ರಚಿಸಿತು. ನಿರ್ಗಮಿತ ಅಧ್ಯಕ್ಷರಾದ ಶಿವಕುಮಾರ್ ಅಂಬಲಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹತ್ವದ ಸಭೆಯು ಅಂಬಲಪಾಡಿಯ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಜರುಗಿತು.
ಸಂಘದ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ರಾಜೇಶ್ ಮಂಡಿಸಿದರೆ, ಕೋಶಾಧಿಕಾರಿ ದಯಾನಂದ ಎ. ಅವರು ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟರು. ಪ್ರತಿಯೊಬ್ಬರ ಒಮ್ಮತದೊಂದಿಗೆ ಹೊಸ ಆಡಳಿತ ಮಂಡಳಿಯನ್ನು ರಚಿಸಲಾಯಿತು.
ನೂತನ ಆಡಳಿತ ಮಂಡಳಿ ಹೀಗಿದೆ:
- ಅಧ್ಯಕ್ಷರು: ಶಿವದಾಸ್ ಪಿ.
- ಗೌರವಾಧ್ಯಕ್ಷರು: ಗೋಪಾಲ್ ಸಿ. ಬಂಗೇರ
- ಉಪಾಧ್ಯಕ್ಷರು: ಎ. ಮುದ್ದಣ್ಣ ಪೂಜಾರಿ
- ಪ್ರಧಾನ ಕಾರ್ಯದರ್ಶಿ: ರಾಜೇಶ್
- ಕೋಶಾಧಿಕಾರಿ: ದಯಾನಂದ ಎ.
- ಜತೆ ಕಾರ್ಯದರ್ಶಿಗಳು: ಮಹೇಂದ್ರ ಕೋಟ್ಯಾನ್ ಮತ್ತು ವಿನಯ್ ಕುಮಾರ್

ಹಾಗೆಯೇ, ಆಡಳಿತ ಸಮಿತಿಯ ಸದಸ್ಯರುಗಳಾಗಿ ಎ. ಶಿವಕುಮಾರ್ (ನಿಕಟಪೂರ್ವ ಅಧ್ಯಕ್ಷರು), ರಾಜೇಂದ್ರ ಪಂದುಬೆಟ್ಟು, ಸುಧಾಕರ್ ಎ., ರಮೇಶ್ ಕೋಟ್ಯಾನ್, ಗೋಧಾವರಿ ಎಮ್. ಸುವರ್ಣ, ಭಾಸ್ಕರ ಅಂಚನ್, ಕುಶಲ್ ಕುಮಾರ್ ಎ., ಸತೀಶ್ ಜಿ. ಪೂಜಾರಿ, ಗುರುರಾಜ್ ಪೂಜಾರಿ, ಲಕ್ಷ್ಮಣ ಪೂಜಾರಿ, ಅವಿನಾಶ್ ಪೂಜಾರಿ, ಭಾಸ್ಕರ ಕೋಟ್ಯಾನ್, ಚೆನ್ನಕೇಶವ, ಜನಾರ್ದನ ಪೂಜಾರಿ, ನಿತಿನ್ ಕುಮಾರ್ ಮತ್ತು ವಾಣಿಶ್ರೀ ಅರುಣ್ ಅವರು ಆಯ್ಕೆಯಾಗಿದ್ದಾರೆ.
ಭಜನಾ ಚಟುವಟಿಕೆಗಳಿಗೆ ವಿಶೇಷ ಒತ್ತು ನೀಡುವ ಉದ್ದೇಶದಿಂದ ಕೆ. ಮಂಜಪ್ಪ ಸುವರ್ಣ ಅವರನ್ನು ಗೌರವ ಭಜನಾ ಸಂಚಾಲಕರಾಗಿ, ಎ. ಶಿವಕುಮಾರ್ ಅವರನ್ನು ಭಜನಾ ಸಂಚಾಲಕರಾಗಿ ಮತ್ತು ಶಂಕರ ಪೂಜಾರಿ ಅವರನ್ನು ಭಜನಾ ಸಹ ಸಂಚಾಲಕರಾಗಿ ಆಯ್ಕೆ ಮಾಡಲಾಯಿತು.
ಮಂದಿರದ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸಲು ಅವಿನಾಶ್ ಪೂಜಾರಿ ಅವರನ್ನು ಅರ್ಚಕರಾಗಿ, ಜೀವನ್, ಅದಿತ್, ಮತ್ತು ಆಯುಷ್ ಅವರನ್ನು ಸಹ ಅರ್ಚಕರಾಗಿ ನಿಯೋಜಿಸಲಾಗಿದೆ. ಸಂಘದ ಹಣಕಾಸಿನ ವ್ಯವಹಾರಗಳ ಪರಿಶೀಲನೆಗಾಗಿ ಸಿ.ಎ. ಗಣೇಶ್ ಹೆಬ್ಬಾರ್ ಅವರನ್ನು ಗೌರವ ಲೆಕ್ಕ ಪರಿಶೋಧಕರನ್ನಾಗಿ ನೇಮಿಸಲಾಯಿತು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವದಾಸ್ ಪಿ. ಮಾತನಾಡಿ, ಸಂಘವನ್ನು ಪ್ರಗತಿಯತ್ತ ಕೊಂಡೊಯ್ಯಲು ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಾಗುವುದು ನಮ್ಮ ಆದ್ಯತೆ. ಭಜನಾ ಸೇವೆಯ ಮೂಲಕ ಸಂಘಟನೆಯನ್ನು ಬಲಪಡಿಸಿದ ಹಿರಿಯರ ಆಶಯದಂತೆ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು. ಸಂಘದ ಸದಸ್ಯರ ಸಲಹೆ, ಸಹಕಾರ ಮತ್ತು ಸೂಚನೆಗಳು ಯಶಸ್ಸಿಗೆ ಅತಿ ಮುಖ್ಯ ಎಂದು ಅವರು ನುಡಿದರು.
ಕಳೆದ ಅವಧಿಯಲ್ಲಿ ಕೈಗೊಂಡ ಕಾರ್ಯಗಳನ್ನು ಶ್ಲಾಘಿಸಿದ ಮಾಜಿ ಪ್ರಧಾನ ಕಾರ್ಯದರ್ಶಿ ಕುಶಲ್ ಕುಮಾರ್ ಎ. ಮತ್ತು ಆಡಳಿತ ಸಮಿತಿ ಸದಸ್ಯ ರಾಜೇಂದ್ರ ಪಂದುಬೆಟ್ಟು, ‘ಶಾಶ್ವತ ಪಾತ್ರೆ ಪರಿಕರ’ ಯೋಜನೆ, ಭಜನಾ ಮಂದಿರದ ‘ಸಂಪರ್ಕ ರಸ್ತೆ ಅಭಿವೃದ್ಧಿ’, ಅತಿ ಹೆಚ್ಚು ಮೊತ್ತದ ‘ವಿದ್ಯಾರ್ಥಿ ವೇತನ’ ವಿತರಣೆ ಮತ್ತು ‘ಬ್ರಹ್ಮ ಕಲಶೋತ್ಸವ’ದಂತಹ ಉದಾತ್ತ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕೆ ಹಿಂದಿನ ಆಡಳಿತ ಸಮಿತಿಯ ಕಾರ್ಯವೈಖರಿಯನ್ನು ಹಾಡಿ ಹೊಗಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಿರ್ಗಮಿತ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ತಮ್ಮ 2 ವರ್ಷಗಳ ಅವಧಿಯಲ್ಲಿ ಮಹಿಳಾ ಘಟಕ, ಸರ್ವ ಸದಸ್ಯರು ಮತ್ತು ಭಕ್ತರ ಸಂಪೂರ್ಣ ಸಹಕಾರದಿಂದ ಸಂಘ ಹಾಗೂ ಭಜನಾ ಮಂದಿರದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಸಂತೃಪ್ತಿ ವ್ಯಕ್ತಪಡಿಸಿದರು. ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳು ತಮಗೆ ತೃಪ್ತಿ ತಂದಿವೆ ಎಂದು ಹೇಳಿದ ಅವರು, ಭವಿಷ್ಯದಲ್ಲಿಯೂ ಸಮುದಾಯದ ಏಳಿಗೆಗಾಗಿ ಶ್ರಮಿಸುವ ಸಂಕಲ್ಪ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ರಾಜೇಶ್ ವಂದನಾರ್ಪಣೆ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು.