
ಕುಂದಾಪುರ: ಬಿಗ್ ಬಾಸ್ ಕನ್ನಡ ಖ್ಯಾತಿಯ ಚೈತ್ರಾ ಕುಂದಾಪುರ ಶುಕ್ರವಾರ (ಮೇ. 9) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉಡುಪಿಯ ಹಿರಿಯಡ್ಕದ ಶ್ರೀಕಾಂತ್ ಕಶ್ಯಪ್ ಎಂಬವರೊಂದಿಗೆ ಆಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಗುರು ಮತ್ತು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.
ಚೈತ್ರಾ ಅವರು ‘ಬಿಗ್ ಬಾಸ್’ ಶೋ ಬಳಿಕ ಮತ್ತೊಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಮದುವೆಗೆ ಒಂದು ದಿನ ಮುಂಚೆ, ತಮ್ಮ ಬಾಳ ಸಂಗಾತಿ ಶ್ರೀಕಾಂತ್ ಕಶ್ಯಪ್ ಅವರೊಂದಿಗಿನ ವಿಡಿಯೋ ಹಂಚಿಕೊಂಡಿದ್ದರು.

ಚೈತ್ರಾ ಕೈ ಹಿಡಿದ ಹುಡುಗ ಯಾರು?
ಚೈತ್ರಾ ರವರ ಬಾಳ ಸಂಗಾತಿ ಶ್ರೀಕಾಂತ್ ಕಶ್ಯಪ್, ಉಡುಪಿಯ ಹಿರಿಯಡ್ಕ ಮೂಲದವರು, ಅನಿಮೇಷನ್ ಕೋರ್ಸ್ ಅನ್ನು ಮುಗಿಸಿ, ಪ್ರಸ್ತುತ ಜೋತಿಷ್ಯ ಮತ್ತು ಪೌರೋಹಿತ್ಯ ಕಾರ್ಯಗಳಲ್ಲಿ ತೊಡಗಿದ್ದಾರೆ. ಚೈತ್ರಾ ಮತ್ತು ಅವರು 12 ವರ್ಷಗಳಿಂದ ಸ್ನೇಹಿತರಾಗಿದ್ದರು.