ಭಟ್ಕಳ: ಜಾಲಿ ಕೋಡಿ ತೀರದಲ್ಲಿ ಬೃಹತ್ ಕಂಟೈನರ್ ಬೋಟ್ ಪತ್ತೆ – ಶಿಪ್‌ನಿಂದ ಬೇರ್ಪಟ್ಟ ಶಂಕೆ

Date:

spot_img

ಭಟ್ಕಳ : ಭಟ್ಕಳ ತಾಲೂಕಿನ ಜಾಲಿ ಕೋಡಿ ಸಮುದ್ರ ತೀರದಲ್ಲಿ ಬೃಹತ್ ಗಾತ್ರದ ಕಂಟೈನರ್ ಬೋಟ್ ಒಂದು ತೇಲಿ ಬಂದು ಸಿಲುಕಿ ಹಾಕಿಕೊಂಡ ಘಟನೆ ಸೋಮವಾರ ಬೆಳಗಿನ ಜಾವ ಸಂಭವಿಸಿದೆ. ಸುಮಾರು 30 ಮೀಟರ್ ಉದ್ದ ಹಾಗೂ 8 ಮೀಟರ್ ಅಗಲದ ಈ ಕಂಟೈನರ್, ಶಿಥಿಲಗೊಳ್ಳದ ಸ್ಥಿತಿಯಲ್ಲಿ ಸಮುದ್ರದಿಂದ ತೇಲಿ ಬಂದು ಜಾಲಿ ಕೋಡಿ ದಡದ ಬಂಡೆಗಲ್ಲು ಪ್ರದೇಶದಲ್ಲಿ ನಿಂತಿದೆ.

ಸ್ಥಳೀಯರ ಪ್ರಕಾರ, ಈ ಕಂಟೈನರ್ ಬೆಳಗ್ಗೆ ಸುಮಾರು 2 ಗಂಟೆಗೆ ಸಮುದ್ರದಲ್ಲಿ ತೇಲುತ್ತಾ ಬಂದು ಬಂಡೆಗಳ ಮಧ್ಯೆ ಸಿಲುಕಿ ಮುಂದೆ ಸಾಗಲಾರದ ಸ್ಥಿತಿಯಲ್ಲಿದೆ. ಕಂಟೈನರ್‌ನ ಮೇಲೆ “Cochin Shipyard” ಎಂಬ ನಾಮಫಲಕವಿದ್ದು, ಇದು ಕೇರಳದಿಂದ ಹೊರನಾಡಿಗೆ ಸಾಗಾಟವಾಗುತ್ತಿದ್ದಾಗ ಸಮುದ್ರದಲ್ಲಿ ಶಿಪ್‌ನಿಂದ ಬೇರ್ಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಕಂಟೈನರ್ ನಿಂತಿರುವ ರೀತಿಯಿಂದ ಅದು ಲಂಗರು ಹಾಕಿದಂತಿರುವುದರಿಂದ ಯಾವುದೇ ತಕ್ಷಣದ ಅಪಾಯ ಅಥವಾ ಹಾನಿಯ ಲಕ್ಷಣಗಳು ಇಲ್ಲ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಘಟನೆಯ ಕುರಿತು ನಿಖರ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.

ಈ ಅನಾಹುತವನ್ನು ನೋಡಲು ನೂರಾರು ಮಂದಿ ಸ್ಥಳಕ್ಕೆ ಬಂದಿದ್ದು, ಜಾಲಿ ಕೋಡಿ ತೀರದಲ್ಲಿ ಈ ಘಟನೆ ಕುತೂಹಲ ಹಾಗೂ ಆತಂಕ ಮೂಡಿಸಿದೆ. ಕರಾವಳಿ ಕಾವಲು ಪಡೆ ಸೇರಿದಂತೆ ಭಟ್ಕಳ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಸ್ಥಳೀಯ ಮೀನುಗಾರರ ಪ್ರಕಾರ, ಸಮುದ್ರದ ಅಂತರದಲ್ಲಿ ಮತ್ತೊಂದು ದೊಡ್ಡ ಹಡಗು ನಿಂತಿರುವುದು ಕಂಡುಬಂದಿದ್ದು, ಈ ಕಂಟೈನರ್‌ನ್ನು ಅದೇ ಹಡಗಿನಿಂದ ಸಾಗಿಸುತ್ತಿದ್ದ ವೇಳೆ ಅದು ಬೇರ್ಪಟ್ಟಿರಬಹುದೆಂಬ ಶಂಕೆ ಹೆಚ್ಚಿದೆ. ಆ ಹಡಗು ಕೂಡಾ ಸರಿಸುಮಾರು ಸಮಯದಿಂದ ಅಲ್ಲಿಯೇ ನಿಂತಿರುವುದರಿಂದ ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ಅಗತ್ಯವಾಗಿದೆ.

ಸ್ಥಳೀಯ ಆಡಳಿತ, ಕರಾವಳಿ ಭದ್ರತಾ ದಳ ಮತ್ತು ಮೀನುಗಾರಿಕಾ ಇಲಾಖೆ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಮೆರಿಕ-ಇರಾನ್ ಯುದ್ಧ: ಪಾಕಿಸ್ತಾನದಿಂದ ಶಾಂತಿ ಯತ್ನ

ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ 10ನೇ ದಿನಕ್ಕೆ ಕಾಲಿಟ್ಟಿದ್ದು, ಶಾಂತಿ ಒಪ್ಪಂದಕ್ಕೆ ಪಾಕಿಸ್ತಾನದ ಮೂಲಕ ಪ್ರಯತ್ನ ಸಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ತೈಲ ಬೆಲೆ ಭಾರಿ ಏರಿಕೆ: ಇರಾನ್ ಅಮೆರಿಕ ಸಂಘರ್ಷದ ಪ್ರಭಾವ

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕಚ್ಚಾ ತೈಲ ದರದಲ್ಲಿ ಭಾರಿ ಏರಿಕೆ ಕಂಡಿದೆ. ಭಾರತಕ್ಕೆ ಇಂಧನ ಬಿಕ್ಕಟ್ಟಿನ ಭೀತಿ ಎದುರಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.