
ಅಜೆಕಾರು : ಕಾರ್ಕಳ ತಾಲೂಕಿನ ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಉದ್ಯಮಿ ಭರತ್ ಶೆಟ್ಟಿ ಪಮ್ಮೂಟ್ಟು ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಪ್ರಕ್ರಿಯೆಯನ್ನು ಗ್ರಾಮ ಆಡಳಿತಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಪ್ರಮೋದ್ ಸುವರ್ಣ ಅವರು ನಡೆಸಿಕೊಟ್ಟರು, ಗ್ರಾಮ ಸಹಾಯಕ ಉದಯ ನಾಯ್ಕ ಸಹಕರಿಸಿದರು.
ನೂತನ ಸಮಿತಿಯ ಇತರೆ ಪದಾಧಿಕಾರಿಗಳು ಮತ್ತು ಸದಸ್ಯರು ಹೀಗಿದ್ದಾರೆ:
- ಉಪಾಧ್ಯಕ್ಷೆ: ಯಶೋಧಾ ಶೆಟ್ಟಿ ಬೊಂಡುಕುಮೇರಿ
- ಕಾರ್ಯದರ್ಶಿ: ಪ್ರಕಾಶ ಶೆಟ್ಟಿ ಮಜಲುಮನೆ
- ಕೋಶಾಧಿಕಾರಿ: ಪ್ರಿತೇಶ್ ಶೆಟ್ಟಿ ಕುಂಠಿತ್ರಿ
- ಸದಸ್ಯರು: ಗಣೇಶ್ ನಾಯ್ಕ ಕಳೆದುಹೊಳ, ವಿಶ್ವನಾಥ ಪೂಜಾರಿ, ವೀಣಾ ಮಡಿವಾಳ
- ಅರ್ಚಕರು: ಕೃಷ್ಣಮೂರ್ತಿ ಭಟ್
ಒಟ್ಟು ಎಂಟು ವ್ಯವಸ್ಥಾಪನಾ ಸಮಿತಿ ಸದಸ್ಯರಲ್ಲಿ ಇಬ್ಬರು ಆಯ್ಕೆ ಪ್ರಕ್ರಿಯೆಯಲ್ಲಿ ಗೈರುಹಾಜರಾಗಿದ್ದರು. ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ವೇಗ ಪಡೆಯಲಿ ಎಂದು ಭಕ್ತಾದಿಗಳು ಹಾರೈಸಿದ್ದಾರೆ.