spot_img

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಭಕ್ತಿ ದೀಕ್ಷಾ ಪರ್ವ : ನೂರಾರು ಭಕ್ತರಿಗೆ ಪೇಜಾವರ ಶ್ರೀಗಳಿಂದ ಕೃಷ್ಣ ಮಂತ್ರೋದೇಶ

Date:

spot_img

ಬೆಂಗಳೂರು : ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶನಿವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು 500 ಕ್ಕೂ ಅಧಿಕ ಹಿಂದು ಶ್ರದ್ಧಾಳುಗಳಿಗೆ ಸಾಮೂಹಿಕ ಕೃಷ್ಣ ಮಂತ್ರೋಪದೇಶ ನೀಡಿ ಅನುಗ್ರಹಿಸಿದರು.

ಜಾತಿ ಪಂಥ , ವಯಸ್ಸು ಲಿಂಗ ಬೇಧವಿದಲ್ಲದೇ 8 ರಿಂದ 80 ವರ್ಷದ ವರೆಗಿನ ಹಿಂದು ಪುರುಷ , ಮಹಿಳೆಯರಿಗೆ ಶ್ರೀಗಳು ತಪ್ತಮುದ್ರಾಧಾರಣೆಗೈದು , ಜಪಸರವನ್ನಿತ್ತು ಕೃಷ್ಣಮಂತ್ರೋಪದೇಶ ನೀಡಿ ಪ್ರಸಾದ ಸಹಿತ ಅನುಗ್ರಹಿಸಿದರು.

ಸಮಸ್ತ ಹಿಂದೂ ಸಮಾಜದ ಸಂಘಟನೆ ಬಲಪಡಿಸುವುದು. ಎಲ್ಲರೂ ಸದಾಚಾರ ನಿಷ್ಠರಾಗಿ ನೆಮ್ಮದಿಯ ಜೀವನ ನಡೆಸುವ ಹಾಗೆ ಆಗಬೇಕು. ನಮ್ಮ ಆಚಾರ ವಿಚಾರಗಳನ್ನು ಜಾತಿ ಪಂಥಗಳ ಬೇಧವಿಲ್ಲದೇ ಸಮಷ್ಟಿಯಾಗಿ ಪಾಲಿಸಿಕೊಂಡು ಬರುವಂತಾಗಬೇಕೆಂಬ ಸದುದ್ದೇಶದಿಂದ ಆಷಾಢ ಮಾಸದ ಪರ್ವಕಾಲದಲ್ಲಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಶ್ರೀಗಳವರು ತಿಳಿಸಿದರು . ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತವಿರುವ ಶ್ರೀಮಠದ ಎಲ್ಲ ಶಾಖೆಗಳಲ್ಲೂ ಇಂಥ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಇದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ . ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ರಾದ ಡಾ ಸತ್ಯನಾರಾಯಣ ಆಚಾರ್ಯ , ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ ವೀರನಾರಾಯಣ ಪಾಂಡುರಂಗಿ , ಪ್ರಧಾನ ವ್ಯವಸ್ಥಾಪಕರಾದ ವಿದ್ವಾನ್ ಶಶಾಂಕ ಭಟ್ ಹಾಗೂ ಪ್ರಾಧ್ಯಾಪಕರು , ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪುತ್ತೂರು ವಿದ್ಯಾರ್ಥಿನಿ ಗರ್ಭಿಣಿ ಪ್ರಕರಣ: ಆರೋಪಿಯ ತಂದೆಗೆ ಜಾಮೀನು

ಸಹಪಾಠಿಯಿಂದ ವಿದ್ಯಾರ್ಥಿನಿ ತಾಯಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗೆ ಆಶ್ರಯ ನೀಡಿದ ಆರೋಪದಡಿ ಬಂಧಿತರಾಗಿದ್ದ ಅವರ ತಂದೆ

ಕಾಂತರಗೋಳಿಯಲ್ಲಿ ಆನ್‌ಲೈನ್ ಜೂಜಾಟಕ್ಕೆ ಪೂರ್ಣವಿರಾಮ; 3 ಮಂದಿ ಸೆರೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಕಾಂತರಗೋಳಿ ಬಸ್ ನಿಲ್ದಾಣದ ಬಳಿ ನಡೆಯುತ್ತಿದ್ದ ಅಕ್ರಮ ಆನ್‌ಲೈನ್ ಗೇಮಿಂಗ್ ಬೆಟ್ಟಿಂಗ್ ದಂಧೆಯ ಮೇಲೆ ಪೊಲೀಸರು ದಿಢೀರ್ ದಾಳಿ

ಗಣೇಶ ವಿಗ್ರಹ ಅಪಮಾನ ಪ್ರಕರಣ: ತಪ್ಪಿತಸ್ಥರ ಬಂಧನಕ್ಕೆ ಎಸ್ಪಿ ಮಿಥುನ್ ಕುಮಾರ್ ಭರವಸೆ

ಶಿವಮೊಗ್ಗ ನಗರದ ರಾಗಿಗುಡ್ಡ ಶಾಂತಿನಗರದ ಬಂಗಾರಪ್ಪ ಬಡಾವಣೆಯಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬರು ಗಣೇಶ ಮತ್ತು ನಾಗದೇವರ ಮೂರ್ತಿಗಳಿಗೆ ಅಪಮಾನವೆಸಗಿದ ಘಟನೆ ನಡೆದಿದೆ

ಮದ್ಯ ಸೇವಿಸಿ ಪೊಲೀಸರೊಂದಿಗೆ ಘರ್ಷಣೆ ಆರೋಪಿ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ವ್ಯಕ್ತಿಯೋರ್ವನು, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ