ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ, ಹಿರಿಯಡ್ಕ ಇವರ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಉಡುಪಿ ತಾಲೂಕು ನೇತೃತ್ವದಲ್ಲಿ ಹಿರಿಯಡ್ಕ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀ ರಾಮ ದೇವರ ಲೋಕಾರ್ಪಣೆಯ ಪ್ರಥಮ ವರ್ಷದ ಪ್ರಯುಕ್ತ ಸುಮಾರು 150ಕ್ಕೂ ಮಿಕ್ಕಿ ಭಜಕರಿಂದ ಏಕಕಾಲದಲ್ಲಿ ಕುಣಿತ ಭಜನಾ ಸೇವೆಗೆ ಕ್ಷೇತ್ರದ ಅರ್ಚಕರಾದ ಶ್ರೀ ಅನಂತ ಅಡಿಗರವರು ಚಾಲನೆ ನೀಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಹಿರಿಯಡ್ಕ ವಲಯದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಎಸ್. ವಿ. ಟಿ. ಹಿರಿಯಡ್ಕ, ಶ್ರೀ ರಾಮ ಭಜನಾ ಮಂಡಳಿ ಭಜನೆಕಟ್ಟೆ ಕೊಂಡಾಡಿ, ಶ್ರೀ ಶಿವಲಿಂಗೇಶ್ವರ ಭಜನಾ ಮಂದಿರ(ರಿ) ಬಜೆ ಅಂಜಾರು, ಶ್ರೀ ಬೈಕಾಡ್ತಿ ರಕ್ತೇಶ್ವರಿ ಭಜನಾ ಮಂಡಳಿ ಹಿರಿಯಡ್ಕ, ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಕೊಂಡಾಡಿ ಕುದಿ, ಶ್ರೀ ಪಾಂಚಜನ್ಯ ಭಜನಾ ತಂಡ ಬ್ರಹ್ಮಾವರ, ಶ್ರೀ ಮುಖ್ಯಪ್ರಾಣ ಭಜನಾ ಮಂಡಳಿ ಮಾಣೈ ಹಿರಿಯಡ್ಕ ಹಾಗೂ ವಿವಿಧ ಭಜನಾ ಮಂಡಳಿಯವರು ಶ್ರೀ ರಾಮ ದೇವರಿಗೆ ಕುಣಿತ ಭಜನಾ ಸೇವೆಯನ್ನು ಭಕ್ತಿಯಿಂದ ಅರ್ಪಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಅರ್ಚಕರಾದ ಶ್ರೀ ರಂಗನಾಥ ಭಟ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಕೊಂಡಾಡಿ, ಭಜನಾ ಮಂಡಳಿಗಳ ಪ್ರಮುಖರು, ದೇವಸ್ಥಾನದ ಸಿಬ್ಬಂದಿಯವರು ಹಾಗೂ ಶ್ರೀ ವೀರಭದ್ರ ದೇವಸ್ಥಾನದ ಕರಸೇವಕರು ಸಹಕರಿಸಿದರು.