
ತುಮಕೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಪುತ್ರ ಎಂಎಲ್‌ಸಿ ರಾಜೇಂದ್ರ ಅವರನ್ನು ಕೊಲ್ಲಲು ‘ಸುಪಾರಿ’ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಕುರಿತು ಅವರು ತುಮಕೂರು ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.
ಈ ಪ್ರಕರಣದ ಕುರಿತು ಕ್ಯಾತಸಂದ್ರ ಪೊಲೀಸರು ರೌಡಿ ಶೀಟರ್ ಸೋಮು ಸೇರಿದಂತೆ ಐದು ಜನರ ವಿರುದ್ಧ FIR ದಾಖಲಿಸಿದ್ದಾರೆ. ಭರತ್, ಅಮಿತ್, ಗುಂಡಾ ಮತ್ತು ಯತೀಶ್ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಅವರನ್ನು ಶೀಘ್ರದಲ್ಲೇ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆಡಿಯೋ ಟೇಪ್‌ನಲ್ಲಿ ಸುಪಾರಿ ಡೀಲ್?
ರಾಜೇಂದ್ರ ಜನವರಿ 2025ರಲ್ಲಿ ಈ ಸಂಚಿನ ಬಗ್ಗೆ ತಿಳಿದುಕೊಂಡಿದ್ದರು, ಆದರೆ ಅದನ್ನು ತಮಾಷೆ ಎಂದುಕೊಂಡು ದೂರು ದಾಖಲಿಸಲು ವಿಳಂಬ ಮಾಡಿದ್ದರು. “ನಾನು ಜನವರಿಯಲ್ಲಿ ಸುಪಾರಿ ಡೀಲ್ ಕುರಿತ 18 ನಿಮಿಷದ ಆಡಿಯೋ ಸಿಕ್ಕಿತ್ತು. “ನಾನು ಎಸ್‌ಪಿಗೆ ದೂರು ನೀಡಿದ್ದೇನೆ ಮತ್ತು ಅವರೊಂದಿಗೆ ವಿವರವಾಗಿ ಮಾತನಾಡಿದ್ದೇನೆ. ಅವರು (ಆರೋಪಿಗಳು) ನನ್ನ ಕಾರಿನಲ್ಲಿ ಜಿಪಿಎಸ್ ಅಳವಡಿಸಲು ಪ್ರಯತ್ನಿಸಿದ್ದಾರೆ. ಒಟ್ಟು 70 ಲಕ್ಷ ರೂ. ಸುಪಾರಿ ಮೊತ್ತದಲ್ಲಿ 5 ಲಕ್ಷ ರೂ. ಪಾವತಿಸಲಾಗಿದೆ. ಅವರು ಅದನ್ನು ಏಕೆ ನೀಡಿದ್ದಾರೆಂದು ನನಗೆ ತಿಳಿದಿಲ್ಲ.ಸೋಮ ಮತ್ತು ಭರತ್ ಹೆಸರುಗಳು ಆಡಿಯೋದಲ್ಲಿವೆ. ಅವರು ಯಾರೆಂದು ನನಗೆ ತಿಳಿದಿಲ್ಲ ಆದರೆ ಒಬ್ಬ ಮಹಿಳೆ ಮತ್ತು ಹುಡುಗ ಅದರ ಬಗ್ಗೆ ಮಾತನಾಡುತ್ತಿರುವ 18 ನಿಮಿಷಗಳ ಆಡಿಯೋ ಇದೆ” ಎಂದು ಅವರು ಮಾಹಿತಿ ನೀಡಿದ್ದಾರೆ.
ಪೊಲೀಸರ ನಿರ್ಧಾರ ಮತ್ತು ಭದ್ರತಾ ಕ್ರಮ
ಪೊಲೀಸರು FIR ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. “ಈ ಬಗ್ಗೆ ನಮಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ. ಆದರೆ ಈಗ FIR ದಾಖಲಿಸಲಾಗಿದೆ, ಹಾಗೂ ಸಚಿವ ರಾಜಣ್ಣ ಮತ್ತು ಎಂಎಲ್‌ಸಿಗೆ ಬಿಗಿ ಭದ್ರತೆ ಒದಗಿಸಲಾಗುವುದು,” ಎಂದು ಎಸ್‌ಪಿ ಅಶೋಕ್ ಕೆ.ವಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ರಾಜಣ್ಣ ಹನಿ-ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧವಿಲ್ಲ ಎಂದು ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.