ಬೆಂಗಳೂರಿನಲ್ಲಿ ಜೆಲ್ಲಿ ಚಾಕೊಲೇಟ್ ರೂಪದಲ್ಲಿ ಗಾಂಜಾ ಮಾರಾಟ: ‘ಜೆಲ್ಲಿ ಗಾಂಜಾ’ ಗ್ಯಾಂಗ್‌ನ ಇಬ್ಬರ ಬಂಧನ

Date:

spot_img

ಬೆಂಗಳೂರು : ಬೆಂಗಳೂರು ನಗರದಲ್ಲಿ ಇದೀಗ ಹೊಸ ಮಾದರಿಯ ಮಾದಕ ವಸ್ತು ತಂತ್ರದಿಂದ ಗಾಂಜಾ ಮಾರಾಟ ನಡೆಯುತ್ತಿರುವ ಶಾಕಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಜೆಲ್ಲಿ ಚಾಕೊಲೇಟ್‌ನಂತೆ ಕಾಣುವ ಈ ನಕಲಿ ಉತ್ಪಾದನೆಗಳಲ್ಲಿ ಗಾಂಜಾ ಮಿಶ್ರಿತ ರಸವನ್ನು ಸೇರಿಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿದ್ದು, ವಿಶೇಷವಾಗಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಟಾರ್ಗೆಟ್ ಆಗಿದ್ದಾರೆ.

ಬ್ಯಾಟರಾಯನಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕೆ. ಜೀವನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಈ ‘ಜೆಲ್ಲಿ ಗಾಂಜಾ’ ಗ್ಯಾಂಗ್‌ನ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೊಹಮದ್ ಜಾಹೀದ್ ಮತ್ತು ಇಸ್ಮಾಯಿಲ್ ಅದ್ಮಾನ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಕಾರ್ಯಾಚರಣೆ ವೇಳೆ ₹3 ಲಕ್ಷ ಮೌಲ್ಯದ 1440 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಚಾಕೊಲೇಟ್ ಜೆಲ್ಲಿ ರೂಪದಲ್ಲಿ ಗಾಂಜಾ ರಸವನ್ನು ಮಿಕ್ಸ್ ಮಾಡಿ ಮಾರಾಟ ಮಾಡುತ್ತಿರುವ ಈ ಗ್ಯಾಂಗ್‌ನ ಪದ್ದತಿ ತೀವ್ರ ಆತಂಕ ಹುಟ್ಟುಹಾಕಿದೆ. ಹೆಬ್ಬಾಳದ ವಿಶ್ವನಾಥ ನಾಗೇನಹಳ್ಳಿಯಲ್ಲಿ ಆರೋಪಿಗಳು ವಾಸವಿದ್ದು, ಮಂಗಳೂರು ಮೂಲದ ವ್ಯಕ್ತಿಯ ಸಹಾಯದಿಂದ ಈ ದಂಧೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

ಪ್ರಸ್ತುತ ಪೊಲೀಸರು ಈ ಜೆಲ್ಲಿ ಗಾಂಜಾ ತಯಾರಿಕೆಯಾಗುತ್ತಿದ್ದ ಸ್ಥಳ ಹಾಗೂ ಇತರ ಸಂಪರ್ಕಿತ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.