ಪೊಲೀಸ್ ಸಮವಸ್ತ್ರಕ್ಕೆ ಕಪ್ಪು ಚುಕ್ಕೆ: ಕಚೇರಿಯಲ್ಲೇ ಮಾಡೆಲ್ ಜೊತೆ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ, ವಿಡಿಯೋ ವೈರಲ್!

Date:

spot_img

ರಾಜ್ಯ ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದುಕೊಂಡು, ಕರ್ತವ್ಯದ ಪಾವಿತ್ರ್ಯತೆಯನ್ನು ಮರೆತು ಕಚೇರಿಯಲ್ಲೇ ಅಸಭ್ಯ ವರ್ತನೆಯಲ್ಲಿ ತೊಡಗಿದ್ದ ಡಿಜಿಪಿ ಡಾ. ರಾಮಚಂದ್ರ ರಾವ್ ಅವರ ವಿಡಿಯೋ ಇದೀಗ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಇತ್ತೀಚೆಗಷ್ಟೇ ನಟಿ ರನ್ಯಾ ರಾವ್ ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿ ಸಿಕ್ಕಿಬಿದ್ದ ಪ್ರಕರಣ ಮಾಸುವ ಮುನ್ನವೇ, ಅವರ ತಂದೆಯೂ ಆಗಿರುವ ಡಿಜಿಪಿ ಅವರ ಈ ನಡವಳಿಕೆ ಪೊಲೀಸ್ ಇಲಾಖೆಯ ಘನತೆಗೆ ದೊಡ್ಡ ಪೆಟ್ಟು ನೀಡಿದೆ.

ಗಣವೇಶದಲ್ಲಿದ್ದೂ ನಿಯಮಗಳನ್ನು ಗಾಳಿಗೆ ತೂರಿ, ತನ್ನ ಕಚೇರಿಯ ಆವರಣದಲ್ಲೇ ಮಾಡೆಲ್ ಒಬ್ಬರ ಜೊತೆ ಏಕಾಂತವಾಗಿ ಕಾಲ ಕಳೆದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿವೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಹಿರಿಯ ಅಧಿಕಾರಿಯೇ ಇಂತಹ ಹೀನ ಕೃತ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ದಿನಗಳ ಹಿಂದಷ್ಟೇ ಇಲಾಖೆಯ ಕೆಳಹಂತದ ಸಿಬ್ಬಂದಿಗಳು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದರು. ಆದರೆ ಈಗ ಇಲಾಖೆಯ ದಿಕ್ಸೂಚಿಯಾಗಬೇಕಿದ್ದ ಹಿರಿಯ ಅಧಿಕಾರಿಯೇ ಶಿಸ್ತಿನ ಮಿತಿ ಮೀರಿದ್ದಾರೆ.

ಈ ಆಘಾತಕಾರಿ ಬೆಳವಣಿಗೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನಗೊಂಡಿದ್ದು, ಗೃಹ ಇಲಾಖೆಯಿಂದ ತಕ್ಷಣದ ವರದಿ ಕೇಳಿದ್ದಾರೆ. “ಪೊಲೀಸ್ ಕವಚದ ಅಡಿಯಲ್ಲಿ ನಡೆಯುವ ಇಂತಹ ಅನೈತಿಕ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ” ಎಂದು ಅವರು ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಐಫೋನ್ ಬಳಕೆದಾರರಿಗೆ ವಾಟ್ಸಾಪ್ ನೀಡುತ್ತಿದೆ ಹೊಸ ಲುಕ್: ಚಾಟಿಂಗ್ ಅನುಭವ ಸಂಪೂರ್ಣ ಬದಲಾವಣೆ!

ಐಒಎಸ್ ಬಳಕೆದಾರರಿಗಾಗಿ ವಾಟ್ಸಾಪ್ ಹೊಸ ಮೆಸೇಜ್ ಬಬಲ್ ವಿನ್ಯಾಸ ಪರೀಕ್ಷಿಸುತ್ತಿದೆ. ಹೊಸ ಲುಕ್ ಮತ್ತು ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ವಿಶ್ವ ಭ್ರೂಣಶಾಸ್ತ್ರಜ್ಞರ ದಿನ(‘ವಿಶ್ವ IVF ದಿನ’)

ಜುಲೈ 25 ರ ವಿಶ್ವ ಭ್ರೂಣಶಾಸ್ತ್ರಜ್ಞರ ದಿನದ ಇತಿಹಾಸ, 1978 ರ ಮೊದಲ IVF ಮಗುವಿನ ಜನನ ಮತ್ತು ಸಂತಾನೋತ್ಪತ್ತಿ ವಿಜ್ಞಾನದ ಮಹತ್ವದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಸಾಲೆ ಅಡುಗೆ ತಿನ್ನುವ ಮುನ್ನ ಒಂದೇ ಒಂದು ಸ್ಪೂನ್ ತುಪ್ಪ-ಅನ್ನ ತಿಂದ್ರೆ ಏನಾಗುತ್ತೆ ಗೊತ್ತಾ? ಸದ್ಗುರು ನೀಡಿದ ಸೂಪರ್ ಹೆಲ್ತ್ ಟಿಪ್ಸ್

ಮಸಾಲೆ ಆಹಾರ ಸೇವನೆಗೆ ಮುನ್ನ ತುಪ್ಪ-ಅನ್ನ ತಿನ್ನುವುದರ ಆರೋಗ್ಯಕಾರಿ ಪ್ರಯೋಜನಗಳು ಹಾಗೂ ಕರುಳಿನ ರಕ್ಷಣೆಯ ರಹಸ್ಯ ಇಲ್ಲಿದೆ. ಜೀರ್ಣಶಕ್ತಿ ಹೆಚ್ಚಿಸಲು ಈ ಹೆಲ್ತ್ ಟಿಪ್ಸ್ ಓದಿ!

ಉಡುಪಿ: ಭಾರಿ ಮಳೆ ಮುನ್ಸೂಚನೆ, ಜುಲೈ 25 ರಂದು ಶಾಲಾ ಕಾಲೇಜುಗಳಿಗೆ ರಜೆ

ಉಡುಪಿ ಜಿಲ್ಲೆಯಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜುಲೈ 25 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ