spot_img

ವಿಗ್ರಹಾರಾಧನೆ ಒಪ್ಪದೇ ದಸರಾ ಉದ್ಘಾಟನೆ ಮಾಡಿದರೆ ನಾಡಹಬ್ಬಕ್ಕೆ ಧಕ್ಕೆ: ಸರ್ಕಾರದ ನಡೆಯನ್ನು ಖಂಡಿಸಿದ ವಿ. ಸುನೀಲ್ ಕುಮಾರ್.

Date:

spot_img

ಬೆಂಗಳೂರು: ಲೇಖಕಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ವಿ. ಸುನೀಲ್ ಕುಮಾರ್‌ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಸ್ಲಾಂ ಧರ್ಮದಲ್ಲಿ ವಿಗ್ರಹಾರಾಧನೆ ಇಲ್ಲ, ಆದರೆ ದಸರಾ ಹಬ್ಬವೇ ಒಂದು ವಿಗ್ರಹಾರಾಧನೆಯ ಪ್ರಮುಖ ಭಾಗವಾಗಿದೆ. ಈ ಹಿನ್ನೆಲೆಯಲ್ಲಿ ಬಾನು ಮುಷ್ತಾಕ್ ಅವರು ವಿಗ್ರಹಾರಾಧನೆಯನ್ನು ಒಪ್ಪುತ್ತಾರೆಯೇ ಎಂಬುದನ್ನು ಸರ್ಕಾರ ದೃಢಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ದಸರಾ ಒಂದು ನಾಡಹಬ್ಬವಾಗಿದ್ದು, ಶ್ರದ್ಧೆ, ಭಕ್ತಿ ಮತ್ತು ಸಂಸ್ಕೃತಿಗೆ ಮಹತ್ವ ನೀಡುತ್ತದೆ. ಇಂತಹ ಪವಿತ್ರ ಕಾರ್ಯಕ್ರಮದ ಉದ್ಘಾಟಕರ ಆಯ್ಕೆಯಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು. ಆದರೆ, ಕಾಂಗ್ರೆಸ್ ಸರ್ಕಾರವು ಹಿಂದೂ ಸಂಸ್ಕೃತಿ ಮತ್ತು ಉತ್ಸವಗಳನ್ನು ಅವಮಾನಿಸುವ ಉದ್ದೇಶದಿಂದಲೇ ಈ ನಿರ್ಧಾರ ಕೈಗೊಂಡಿದೆ ಎಂದು ಸುನೀಲ್ ಕುಮಾರ್ ಆರೋಪಿಸಿದರು. ಈ ವಿವಾದವನ್ನು ಸರ್ಕಾರವೇ ತನ್ನ ಮೇಲೆ ಎಳೆದುಕೊಂಡಿದೆ ಎಂದು ಅವರು ಟೀಕಿಸಿದರು.

ಇದೇ ವೇಳೆ, ಮಹಮದ್ ಘೋರಿಯಿಂದ ಹಿಡಿದು ಪಿಎಫ್‌ಐ ವರೆಗಿನ ಸಂಘಟನೆಗಳು ಹಿಂದೂ ದೇವಾಲಯಗಳ ವಿಗ್ರಹಗಳನ್ನು ನಾಶಪಡಿಸಿದ ಇತಿಹಾಸವನ್ನು ಉಲ್ಲೇಖಿಸಿದ ಅವರು, ಇಂತಹ ಘಟನೆಗಳು ವಿಗ್ರಹಾರಾಧನೆಯ ವಿರುದ್ಧ ಇರುವ ಮನಸ್ಥಿತಿಯನ್ನು ತೋರಿಸುತ್ತವೆ. ಇತ್ತೀಚೆಗೆ ಧರ್ಮಸ್ಥಳದಲ್ಲಿ ನಡೆದ ವಿವಾದದಲ್ಲಿಯೂ ಸರ್ಕಾರದ ಸಹಾನುಭೂತಿ ಪಿತೂರಿ ಮಾಡಿದವರ ಪರವಿತ್ತು ಎಂದು ಅವರು ಆರೋಪಿಸಿದರು. ಇದರ ಮುಂದುವರಿದ ಭಾಗವೇ ದಸರಾ ಉದ್ಘಾಟಕರ ಆಯ್ಕೆ ಎಂದರು.

ಧರ್ಮಸ್ಥಳ ಪ್ರಕರಣದ ಕುರಿತು ಮಾತನಾಡಿದ ಸುನೀಲ್ ಕುಮಾರ್, ಬಿಜೆಪಿ ಈ ಪ್ರಕರಣದ ಎಸ್‌ಐಟಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಇದೊಂದು ವ್ಯವಸ್ಥಿತ ಪಿತೂರಿ ಎಂದು ಹೇಳಿದ್ದಾರೆ. ಆದ್ದರಿಂದ ಎಸ್‌ಐಟಿ ತನಿಖೆಯಲ್ಲಿ ಇದರ ಹಿಂದಿರುವ ನಿಜವಾದ ಸತ್ಯ ಬಯಲಾಗಬೇಕು ಎಂದು ಆಗ್ರಹಿಸಿದರು. ತನಿಖೆ ಮತ್ತು ತನಿಖೆ ಹೆಸರಿನಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಅವಹೇಳನ ಮಾಡಬಾರದು ಎಂದು ಹೇಳಿದ ಅವರು, “ಇದು ಕೇವಲ ಒಬ್ಬ ಮುಸುಕುಧಾರಿಯ ಕೆಲಸವಲ್ಲ, ಇದರ ಹಿಂದೆ ಅನೇಕ ಮುಸುಕುಧಾರಿಗಳಿದ್ದಾರೆ. ಈ ಎಲ್ಲ ಪಿತೂರಿಗಳು ಶೀಘ್ರವೇ ಹೊರಬರಲಿ” ಎಂದು ಆಗ್ರಹಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಹಣಕಾಸು ಜಾಲದ ಬೇರುಗಳ ಪತ್ತೆಗೆ ಇ.ಡಿ. ಕಾರ್ಯಾಚರಣೆ.

ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಮಾನವ ಹಕ್ಕುಗಳ ಆಯೋಗದ ಹೆಸರು ದುರುಪಯೋಗ: ಗಿರೀಶ್‌ ಮಟ್ಟಣ್ಣವರ್‌ ವಿರುದ್ಧ ದೂರು.

ಧರ್ಮಸ್ಥಳದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಗಿರೀಶ್‌ ಮಟ್ಟಣ್ಣವರ್‌ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ

ಸೊಸೆಯ ಅಮಾನುಷ ಕೃತ್ಯ: ಮುದ್ದೆಗೆ ನಿದ್ರೆ ಮಾತ್ರೆ ಬೆರೆಸಿ ಅತ್ತೆಯ ಕೊಲೆ, ಮರಣೋತ್ತರ ಪರೀಕ್ಷೆಗೆ ಶವ ಹೊರಕ್ಕೆ.

ಮುದ್ದೆಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ತೆಯನ್ನು ಕೊಲೆ ಮಾಡಿದ ಆರೋಪದಡಿ, ಸೊಸೆ ಮತ್ತು ಆಕೆಯ ಪ್ರಿಯಕರನ ಕ್ರೂರ ಕೃತ್ಯ ಬೆಳಕಿಗೆ ಬಂದಿದೆ

ಧರ್ಮಸ್ಥಳ ಪ್ರಕರಣದ ತನಿಖೆ ತೀವ್ರ: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಮಹಜರು

ಎಸ್‌ಐಟಿ ಅಧಿಕಾರಿಗಳು ಉಜಿರೆ ಸಮೀಪದ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ಮಹಜರು ನಡೆಸಿದ್ದಾರೆ