ಬೆಳ್ತಂಗಡಿಯಲ್ಲಿ ಮನೆಯ ಅಂಗಳದಲ್ಲೇ ಕೃಷಿಕನ ಮೇಲೆ ಚಿರತೆ ದಾಳಿ; ಜನರ ಆಕ್ರೋಶ

Date:

spot_img

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಚಿರತೆಗಳ ಹಾವಳಿ ಮಿತಿಮೀರಿದ್ದು, ಶುಕ್ರವಾರ ಬೆಳಿಗ್ಗೆ ಮನೆಯ ಅಂಗಳದಲ್ಲಿದ್ದ ಕೃಷಿಕರೊಬ್ಬರ ಮೇಲೆ ಚಿರತೆ ಭೀಕರ ದಾಳಿ ನಡೆಸಿದೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ಯಾಡಿ 1 ಗ್ರಾಮದ ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ (62) ಚಿರತೆ ದಾಳಿಗೊಳಗಾದ ದುರ್ದೈವಿ. ಜ. 16 ರಂದು ಬೆಳಿಗ್ಗೆ 8:15 ರ ಸುಮಾರಿಗೆ ಮಂಜಪ್ಪ ಅವರು ತಮ್ಮ ಮನೆಯ ಅಂಗಳದಲ್ಲಿದ್ದಾಗ ಪೊದೆಯಲ್ಲಿದ್ದ ಚಿರತೆ ಏಕಾಏಕಿ ಅವರ ಮೇಲೆ ಜಿಗಿದಿದೆ. ಪ್ರಾಣಾಪಾಯದಿಂದ ಪಾರಾಗಲು ಮಂಜಪ್ಪ ಅವರು ತಕ್ಷಣವೇ ಸಮೀಪದ ಅಡಿಕೆ ಮರವನ್ನು ಹತ್ತಿದ್ದಾರೆ. ಆದರೂ ಚಿರತೆಯು ಅವರ ಕಾಲನ್ನು ಬಿಡದೆ ಪರಚಿದ್ದರಿಂದ ಗಂಭೀರ ಗಾಯಗಳಾಗಿವೆ. ಪ್ರಸ್ತುತ ಅವರು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಂಜಪ್ಪ ಅವರ ಪುತ್ರ ಪ್ರಭಾಕರ ನಾಯ್ಕ ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ವಾಗ್ವಾದ ನಡೆಸಿದರು. ಕೇವಲ ಕನ್ಯಾಡಿ ಮಾತ್ರವಲ್ಲದೆ, ಮುಂಡಾಜೆಯ ಸೀಟು ಮೂರು ಮಾರ್ಗದ ಬಳಿ ಶಾಲಾ ಬಾಲಕನೊಬ್ಬನಿಗೆ ಚಿರತೆ ಎದುರಾಗಿದೆ. ಇತ್ತ ಕಾನರ್ಪ ಪರಿಸರದಲ್ಲಿ ನಾಲ್ಕು ಮರಿಗಳೊಂದಿಗೆ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಅರಣ್ಯ ಇಲಾಖೆ ಕೂಡಲೇ ಚಿರತೆ ಹಿಡಿಯಲು ಬೋನು ಇರಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಯುವತಿ ಕೊಲೆ ಕೇಸ್: ಸುಳ್ಳು ಪೋಸ್ಟ್ ಹಾಕಿದ ಹರ್ಷ ಶೆಟ್ಟಿ ವಿರುದ್ಧ ಪ್ರಕರಣ

ಬಿ.ಸಿ.ರೋಡ್ ಯುವತಿ ಕೊಲೆ ಪ್ರಕರಣದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡಿ ಸಮುದಾಯಗಳ ನಡುವೆ ವೈಷಮ್ಯ ಮೂಡಿಸಲು ಯತ್ನಿಸಿದ ಹರ್ಷ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕರ್ನಾಟಕದಲ್ಲಿ ಇನ್‌ಫ್ಲುಯೆಂಜಾ ಜ್ವರದ ಭೀತಿ: ಆರೋಗ್ಯ ಇಲಾಖೆ ಅಲರ್ಟ್

ರಾಜ್ಯದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಸಾಂಕ್ರಾಮಿಕ ಇನ್‌ಫ್ಲುಯೆಂಜಾ ಜ್ವರ ಹೆಚ್ಚಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರದಿಂದಿರಲು ಸೂಚನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ರೋಹಿತ್ ಶರ್ಮಾ ನಿವೃತ್ತಿ ವದಂತಿಗೆ ಬ್ರೇಕ್, ಲಾರ್ಡ್ಸ್‌ನಲ್ಲಿ ಶತಕದ ದಾಖಲೆ

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ನಿವೃತ್ತಿ ವದಂತಿಗಳನ್ನು ತಳ್ಳಿಹಾಕಿದ ರೋಹಿತ್ ಶರ್ಮಾ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹಾಸನ ಬಸ್‌ನಲ್ಲಿ ಮಹಿಳಾ ಕಂಡಕ್ಟರ್-ಪ್ರಯಾಣಿಕಳ ಫೈಟ್ ವೈರಲ್

ಹಾಸನದಲ್ಲಿ ಮಹಿಳಾ ಕಂಡಕ್ಟರ್ ಹಾಗೂ ಪ್ರಯಾಣಿಕಳ ನಡುವೆ ಸೀಟಿಗಾಗಿ ನಡೆದ ಭೀಕರ ಜಗಳದ ವಿಡಿಯೋ ವೈರಲ್ ಆಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ