
ಬೈಲೂರು: ಇಲ್ಲಿನ ಬಸ್ರಿ ಶಾಲೆಯಲ್ಲಿ ಕಳೆದ 39 ವರ್ಷಗಳ ಕಾಲ ಸುದೀರ್ಘ ಹಾಗೂ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ಗೌರವಾನ್ವಿತ ಶಿಕ್ಷಕರಾದ ಶ್ರೀಯುತ ಉದಯ ಕುಮಾರ್ ಶೆಟ್ಟಿ ಅವರು ಇದೇ ಬರುವ ಮಾರ್ಚ್ 31 ರಂದು ನಿವೃತ್ತಿ ಹೊಂದಲಿದ್ದಾರೆ.
ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಇವರ ಬೀಳ್ಕೊಡುಗೆ ಸಮಾರಂಭವನ್ನು ಅತ್ಯಂತ ಸ್ಮರಣೀಯವಾಗಿಸಲು ಅಭಿಮಾನಿಗಳು ಹಾಗೂ ಶಿಷ್ಯ ವೃಂದದವರು ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ‘ಉದಯೋತ್ಸವ’ ಎಂಬ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಅವಿರೋಧವಾಗಿ ನಡೆಯಿತು.
ನೂತನ ಸಮಿತಿಯ ವಿವರ ಹೀಗಿದೆ:
- ಅಧ್ಯಕ್ಷರು: ಪ್ರಶಾಂತ್ ಕುಮಾರ್ ಶೆಟ್ಟಿ, ಗುತ್ತು ಮನೆ ಬೈಲೂರು.
- ಗೌರವ ಅಧ್ಯಕ್ಷರು: ಉದಯ ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಕರು, ಚಿಕ್ಕಲ್ ಬೆಟ್ಟು.
- ಪ್ರಧಾನ ಕಾರ್ಯದರ್ಶಿ: ಮುಸ್ತಾಫ್ ಜಾರ್ಕಳ.
- ಕೋಶಾಧಿಕಾರಿ: ಮಹೇಂದ್ರ ಕಾಮತ್.

ಅವಿರೋಧವಾಗಿ ಆಯ್ಕೆಯಾಗಿರುವ ಎಲ್ಲಾ ಪದಾಧಿಕಾರಿಗಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ‘ಉದಯೋತ್ಸವ’ ಕಾರ್ಯಕ್ರಮವು ಗುರು-ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿಯಾಗಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.




































