spot_img

“ಬನ್ನಂಜೆ 90 ಉಡುಪಿ ನಮನ”: ಪುತ್ತಿಗೆ ಶ್ರೀಗಳಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Date:

spot_img

ಉಡುಪಿ: ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಅಪ್ರತಿಮ ಪಾಂಡಿತ್ಯದಿಂದ ಹೆಸರುವಾಸಿಯಾದ ವಿದ್ಯಾವಾಚಸ್ಪತಿ ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ ಅವರ 90ನೇ ಜನ್ಮದಿನಾಚರಣೆಯ ಪ್ರಯುಕ್ತ, ಉಡುಪಿಯ ಅಭಿಮಾನಿಗಳ ವತಿಯಿಂದ ಆಗಸ್ಟ್ 3ರಂದು ಎಂಜಿಎಂ ಕಾಲೇಜಿನಲ್ಲಿ ನಡೆಯಲಿರುವ “ಬನ್ನಂಜೆ 90 ಉಡುಪಿ ನಮನ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಭಾನುವಾರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, “ನಮ್ಮ ಪರ್ಯಾಯದ ಅವಧಿಯಲ್ಲಿ ನಡೆಯುತ್ತಿರುವ ಮಂಡಲೋತ್ಸವ ಸಂದರ್ಭದಲ್ಲಿ ಬನ್ನಂಜೆ ಉಡುಪಿ ನಮನ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಂತ ಅಭಿನಂದನೀಯ. ಬನ್ನಂಜೆಯವರು ತಮ್ಮ ಅಪಾರ ಜ್ಞಾನದಿಂದ ಎಲ್ಲರ ಮನಸ್ಸನ್ನು ಆಕರ್ಷಿಸಿದವರು. ಅವರ ಅಭಿಮಾನಿಗಳು ಮಾಡುತ್ತಿರುವ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಬನ್ನಂಜೆ ಉಡುಪಿ ನಮನ ಆಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಸ್ಟ್ರೋ ಮೋಹನ್, ಸಂಚಾಲಕರಾದ ಜನಾದರ್ನ ಕೊಡವೂರು, ರವಿರಾಜ್ ಎಚ್.ಪಿ, ಕೋಶಾಧಿಕಾರಿ ಪ್ರೊ. ಸದಾಶಿವ್ ರಾವ್, ಉಪಾಧ್ಯಕ್ಷರಾದ ಪ್ರೊಫೆಸರ್ ಶಂಕರ್, ನಾರಾಯಣ ಮಡಿ, ಡಾ. ಭಾರ್ಗವಿ ಐತಾಳ್, ಡಾ. ರಾಮಚಂದ್ರ ಐತಾಳ್, ಕಾರ್ಯದರ್ಶಿಗಳಾದ ರಾಜೇಶ್ ಭಟ್ ಪಣಿಯಾಡಿ, ಪೂರ್ಣಿಮಾ ಜನಾರ್ದನ್, ಪ್ರಭಾಕರ ತುಮರಿ, ಹಿರಿಯರಾದ ಪ್ರಭಾವತಿ ವಿಶ್ವನಾಥ್ ಶೆಣೈ, ಭಾಸ್ಕರ್ ರಾವ್ ಹಾಗೂ ಸಮಿತಿಯ ಸದಸ್ಯರಾದ ರಾಘವೇಂದ್ರ ಪ್ರಭು ಕರ್ವಾಲು, ಸುಶಾಂತ್ ಕೆರೆಮಠ, ಮಹೇಶ್ ಠಾಕೂರ್, ಸತೀಶ್ ಕೊಡವೂರು, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಜಯಶ್ರೀ ಉಡುಪಿ, ಸುಮಿತ್ರ ಕೆರೆಮಠ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ಡಾ. ಗಣೇಶ್ ಪ್ರಸಾದ್ ನಾಯಕ್, ರಾಮಾಂಜಿ ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಜಡ್ಡಿನಂಗಡಿ ಬಳಿ ವ್ಯಕಿಯೋರ್ವರ ಆಕಸ್ಮಿಕ ಸಾವು

ನೀರೆ ಜಡ್ಡಿನಂಗಡಿ ಬಸ್ಸು ನಿಲ್ದಾಣದ ಬಳಿ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಮೃತ ಪಟ್ಟ ಘಟನೆ ವರದಿಯಾಗಿದೆ.

ಮೊಣಕೈ ಕಪ್ಪಾಗಲು ಕಾರಣವೇನು? ಸರಳ ಮನೆಮದ್ದಿನಿಂದ ಕಲೆ ಮಾಯವಾಗಿಸಲು ಇಲ್ಲಿದೆ ಪರಿಹಾರ!

ಕಪ್ಪು ಮೊಣಕೈಗಳನ್ನು ನಿವಾರಿಸಲು ಕಡಲೆ ಹಿಟ್ಟು ಮತ್ತು ನಿಂಬೆ ಹಣ್ಣಿನ ಮಿಶ್ರಣ ಅತ್ಯಂತ ಪರಿಣಾಮಕಾರಿ.

ಚೀನಾದಿಂದ ಕ್ರಾಂತಿಕಾರಿ ‘ಪರಮಾಣು ಬ್ಯಾಟರಿ’: 50 ವರ್ಷಗಳ ಕಾಲ ಚಾರ್ಜ್‌ರಹಿತ ವಿದ್ಯುತ್ ಸರಬರಾಜು!

ಚೀನಾದ ನವೋದ್ಯಮವೊಂದು ಹೊಸ ಪರಮಾಣು ಬ್ಯಾಟರಿಯನ್ನು ಅನಾವರಣಗೊಳಿಸಿದ್ದು, ಇದು ಚಾರ್ಜಿಂಗ್ ಅಥವಾ ನಿರ್ವಹಣೆಯ ಅಗತ್ಯವಿಲ್ಲದೆ 50 ವರ್ಷಗಳ ಕಾಲ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿಕೊಂಡಿದೆ.

ಬಾಡುತ್ತಿರುವ ತುಳಸಿ ಗಿಡಕ್ಕೆ ಮತ್ತೆ ಜೀವ ತುಂಬಲು ಹೀಗೆ ಮಾಡಿ: ಇಲ್ಲಿದೆ ತಜ್ಞರ ಸಲಹೆಗಳು!

ಬಹುತೇಕ ಮನೆಗಳಲ್ಲಿ ಕಾಣಸಿಗುವ ತುಳಸಿ ಸಸ್ಯಗಳು, ಅದರಲ್ಲೂ ಕುಂಡದಲ್ಲಿ ನೆಟ್ಟಾಗ ಒಣಗಲು ಪ್ರಾರಂಭಿಸುತ್ತವೆ. ಶಾಸ್ತ್ರಗಳ ಪ್ರಕಾರ, ಮನೆಯಲ್ಲಿರುವ ತುಳಸಿ ಗಿಡ ಒಣಗುವುದು ಶುಭವಲ್ಲ ಎಂದು ಹೇಳಲಾಗುತ್ತದೆ.