
ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ವೆಬ್‌ಸೈಟ್ ಈಗ ಕನ್ನಡದಲ್ಲೂ ಲಭ್ಯವಿದೆ. ಈ ಮೂಲಕ ಪ್ರಯಾಣಿಕರು ವಿಮಾನ ನಿಲ್ದಾಣ ಸೇವೆಗಳನ್ನು ಸುಲಭವಾಗಿ ಬಳಸಿಕೊಳ್ಳಬಹುದು ಎಂದು ಬಿಐಎಎಲ್ ಪ್ರಕಟಣೆ ಮೂಲಕ ತಿಳಿಸಿದೆ.
“ನಮ್ಮ ವೆಬ್‌ಸೈಟ್ ಕನ್ನಡ ಆವೃತ್ತಿಯನ್ನು ಪರಿಚಯಿಸಲು ಸಂತೋಷಪಡುತ್ತೇವೆ. ಇನ್ಮುಂದೆ ಗ್ರಾಹಕರು ಕನ್ನಡದಲ್ಲಿ ಎಲ್ಲ ಅಗತ್ಯ ಮಾಹಿತಿಯನ್ನು ಪಡೆಯಬಹುದು” ಎಂದು ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮಾರರ್ ಹೇಳಿದ್ದಾರೆ.