
ಕುದಿಗ್ರಾಮ : ಪಾರಂಪರಿಕ ಕೃಷಿ ಸಂಸ್ಕೃತಿಯ ಘನತೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ, ಕುದಿಗ್ರಾಮ-82ರಲ್ಲಿ ಶ್ರೀ ಮಹಾಲಿಂಗೇಶ್ವರ ಕೊಂಡಾಡಿ ಬಳಗದ ಆಶ್ರಯದಲ್ಲಿ “ಮೂಜನೇರ್ವದ ಬಲೇ ಕೆಸರ್ ಗೊಬ್ಬುಗ” ಕಾರ್ಯಕ್ರಮವನ್ನು ಜೂನ್ 29ರ ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ದಿ| ಶಾರದಾ ಉಮನಾಥ ಶೆಟ್ಟಿ ಅವರ ಬಾಕ್ಯಾರ್‌ನಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಡಾ| ಸೂರಜ್ ಎ.ಆರ್, ದೀರ್ಘಾಯು ಆರ್ಯುವೇದ, ಬಾನಂಪಾಡಿ, ಕುದಿ-82 ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ| ಸ್ವಾತಿ ಪಿ.ಜೆ. (ಬಾನಂಪಾಡಿ), ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೃಷಿಕರಾದ ಕುದಿ ಶ್ರೀನಿವಾಸ ಭಟ್ ಹಾಗೂ ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರುಗಳು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಸಂದರ್ಭದಲ್ಲಿ ಗಿನ್ನಿಸ್ ದಾಖಲೆ ಪುರಸ್ಕೃತ ಮಹೇಶ್ ಮರ್ಣೆ ಹಾಗೂ ಗಿಡಮೂಲಿಕೆ ಆಧಾರಿತ ಔಷಧ ತಯಾರಕರು ಸುಂದರ ನಾಯ್ಕ (ಕುದಿ, ಕೊಂಡಾಡಿ, ಮಿತ್ತೊಟ್ಟು) ಅವರನ್ನು ಗೌರವಿಸಲಾಗುವುದು.
ಈ ಸಂದರ್ಭದಲ್ಲಿ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದ್ದು, ಅದರಲ್ಲಿ ಪ್ರಸನ್ನ ಕುಮಾರ್ ಹೆಗ್ಡೆ (ಚಂದ್ರಗಿರಿ), ಯುವ ಉದ್ಯಮಿ ವಿಠಲ ಚರಣ್, ನಿವೃತ್ತ ಶಿಕ್ಷಕರಾದ ಶಿವರಾಮ್ ನಾಯ್ಕ (ಶಿವಲೀಲಾ, ಹಿರಿಯಡಕ) ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂದೀಪ ಮಡಿವಾಳ (ಕುದಿ 82) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕೆ. ಹರೀಶ್ ಭಟ್, ಶ್ರೀನಾಥ್ ಶೆಟ್ಟಿ (ಕೊಂಡಾಡಿ) ಹಾಗೂ ಶ್ರೀ ಮಹಾಲಿಂಗೇಶ್ವರ ಕೊಂಡಾಡಿ ಬಳಗದವರು ಈ ಕಾರ್ಯಕ್ರಮಕ್ಕೆ ಸ್ನೇಹಪೂರ್ವಕವಾಗಿ ಸ್ವಾಗತವನ್ನು ಕೋರಿದ್ದಾರೆ.