
ಹಿರಿಯಡ್ಕ: ಹಿಂದೂ ಸಮಾಜವನ್ನು ಸಂಘಟಿಸುವ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಹಿರಿಯಡ್ಕ ತಾಲೂಕು ಬೈಲೂರು ಮಂಡಲ ವತಿಯಿಂದ ದಿನಾಂಕ 25/01/2026ರ ಭಾನುವಾರದಂದು ಬೈಲೂರಿನಲ್ಲಿ ‘ಹಿಂದೂ ಸಂಗಮ’ ಕಾರ್ಯಕ್ರಮವು ಅತ್ಯಂತ ವೈಭವದಿಂದ ಜರುಗಿತು.
ವೈವಿಧ್ಯಮಯ ಶೋಭಾಯಾತ್ರೆ ಮತ್ತು ಚಾಲನೆ
ಕಾರ್ಯಕ್ರಮಕ್ಕೂ ಮೊದಲು ಬೈಲೂರು ರಾಮಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿ, ಗೋಮಾತೆಗೆ ಗೋಗ್ರಾಸ ನೀಡುವ ಮೂಲಕ ಮಂಗಳ ಚಾಲನೆ ನೀಡಲಾಯಿತು. ಬಳಿಕ ನಡೆದ ಅಭೂತಪೂರ್ವ ಶೋಭಾಯಾತ್ರೆಯಲ್ಲಿ ಪುರುಷರು ಮತ್ತು ಮಹಿಳೆಯರು ಏಕರೂಪದ ಸಮವಸ್ತ್ರ ಧರಿಸಿ ಶಿಸ್ತಿನಿಂದ ಪಾಲ್ಗೊಂಡಿದ್ದರು. ಚೆಂಡೆ ವಾದನ, ಸ್ತಬ್ಧಚಿತ್ರಗಳು ಹಾಗೂ ಸುಮಾರು 11 ಸ್ಥಳೀಯ ಭಜನಾ ತಂಡಗಳ ಕುಣಿತ ಭಜನೆ ಮೆರವಣಿಗೆಗೆ ಕಳೆ ತಂದವು.
ಹಿರಿಯ ಮಾರ್ಗದರ್ಶಕರಾದ ಶ್ರೀಯುತ ವೆಂಕಪ್ಪ ಹೆಗ್ಡೆ ಗೋವಿಂದೂರು ಹಾಗೂ ಮುಂಬೈ ಉದ್ಯಮಿ, ಹಿಂದೂ ಮುಖಂಡ ಮಹೇಶ್ ಶೆಟ್ಟಿ ತೆಳ್ಳಾರು ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ಮೆರವಣಿಗೆಯು ರಾಮಮಂದಿರದಿಂದ ಹೊರಟು ಬೈಲೂರು ಮಾರಿಯಮ್ಮ ದೇವಸ್ಥಾನದ ಸಮೀಪವಿರುವ ಸೌಂದರ್ಯ ಕಾಂಪ್ಲೆಕ್ಸ್ ವರೆಗೆ ವಿಜೃಂಭಣೆಯಿಂದ ಸಾಗಿತು.
ಸಭಾ ಕಾರ್ಯಕ್ರಮ ಮತ್ತು ಜಾಗೃತಿ ಭಾಷಣ
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ್ ಚಂದ್ರಬಾಬು ಅವರು ಹಿಂದೂ ಸಮಾಜದ ಬಲವರ್ಧನೆ ಮತ್ತು ಜಾಗೃತಿಯ ಕುರಿತು ಭೌಧಿಕ್ ನೀಡಿದರು. ಖ್ಯಾತ ವಕೀಲರಾದ ಶ್ರೀಮತಿ ವಿದ್ಯಾಮಲ್ಯ ಅವರು ಮಾತನಾಡಿ, ಮಹಿಳೆಯರಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಜಾಗೃತಿಯ ಅಗತ್ಯತೆಯನ್ನು ಪ್ರತಿಪಾದಿಸಿದರು. ಅಧ್ಯಕ್ಷತೆ ವಹಿಸಿದ್ದ ವೆಂಕಪ್ಪ ಹೆಗ್ಡೆ ಗೋವಿಂದೂರು ಅವರು ಕಾರ್ಯಕ್ರಮದ ಆಶಯದ ಬಗ್ಗೆ ವಿವರಿಸಿದರು.
ಗಣ್ಯರ ಉಪಸ್ಥಿತಿ
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಪ್ರಮುಖ ಗಣ್ಯರ ಪಟ್ಟಿ ಹೀಗಿದೆ:
- ಉದ್ಯಮಿಗಳು ಹಾಗೂ ಪ್ರಮುಖರು: ಸಂತೋಷ ವಾಗ್ಲೆ (ಉಡುಪಿ), ಸುಭಾಷಚಂದ್ರ ಹೆಗ್ಡೆ (ಪುಣೆ), ಸುಧೀರ್ ಹೆಗ್ಡೆ ಬೈಲೂರು, ವಿಕ್ರಂ ಹೆಗ್ಡೆ ಕಣಜಾರ್, ಚಂದನ್ ಹೆಗ್ಡೆ ಕಣಜಾರ್.
- RSS ಪ್ರಮುಖರು: ಗೋಪಿನಾಥ್ ಪಳ್ಳಿ, ರಮೇಶ್ ಅಂಬಲಪಾಡಿ, ಮಂಜುನಾಥ್ ಭಟ್.
- ಆಯೋಜನಾ ಸಮಿತಿ ಪದಾಧಿಕಾರಿಗಳು: ಪ್ರಶಾಂತ್ ಶೆಟ್ಟಿ ಅಂಜಾರ್ (ತಾಲೂಕು ಸಂಯೋಜಕ), ರಮೇಶ್ ಕಲ್ಲೊಟ್ಟೆ (ಸಹ ಸಂಯೋಜಕ), ಚೇತನಾ ನಾಯಕ್, ದೀಕ್ಷಾ ರಾವ್ (ಉಪಾಧ್ಯಕ್ಷೆ).
- ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರು: ಪ್ರಶಾಂತ್ ಶೆಟ್ಟಿ ಗುತ್ತು ಮನೆ ಬೈಲೂರು, ಉದಯ ಹೆಗ್ಡೆ ಗೋವಿಂದೂರು, ಸುಮಿತ್ ಶೆಟ್ಟಿ ಕೌಡೂರು, ಪ್ರಸನ್ನ ಶೆಟ್ಟಿ ಕೌಡೂರು, ಸದಾನಂದ ಸಾಲಿಯಾನ್ (ವಕೀಲರು), ನೀರೆ ರವೀಂದ್ರ ನಾಯಕ್, ಆನಂದ್ ಪೂಜಾರಿ, ರಮೇಶ್ ಕಿಣಿ, ಸುನಿಲ್ ಹೆಗ್ಡೆ (ಅಧ್ಯಕ್ಷರು, ಏರ್ಲಪ್ಪಾಡಿ ಗ್ರಾ.ಪಂ.), ಸಚ್ಚಿದಾನಂದ ಪ್ರಭು (ಅಧ್ಯಕ್ಷರು, ನೀರೆ ಗ್ರಾ.ಪಂ.), ಸುಜಾತ (ಅಧ್ಯಕ್ಷರು, ಬೈಲೂರು ಗ್ರಾ.ಪಂ.), ಸುರೇಶ ಸಾಲಿಯಾನ್, ಮಾಲಿನಿ ಜೆ. ಶೆಟ್ಟಿ, ಸೌಮ್ಯಾ ಶೆಟ್ಟಿ, ಮಹೇಶ್ ಬೈಲೂರು, ಸುರೇಶ ಶೆಟ್ಟಿ ಸಾಯಿರಾಂ, ಶ್ರೀನಿವಾಸ್ ಪೂಜಾರಿ ಕಾಂತರಗೋಳಿ, ವಿಶ್ವೇಶ್ ದೇವಾಡಿಗ ರಂಗನಪಲ್ಕೆ, ಸುಬ್ರಮಣ್ಯ ದೇವಾಡಿಗ, ಜಗದೀಶ್ ಪೂಜಾರಿ, ಸಚ್ಚಿದಾನಂದ ಶೆಟ್ಟಿ, ಕಿಶೋರ್ ಶೆಟ್ಟಿ ಕಣಜಾರು, ಸಂತೋಷ್ ಸಾಲಿಯಾನ್, ಗಣೇಶ್ ಕೌಡೂರು, ಧೀರಜ್ ಹೆಗ್ಡೆ, ಮಹೇಶ್ ಮಾಡ, ಸಂದೀಪ್ ಮಾಡ, ಪುರುಷೋತ್ತಮ್ ಆಚಾರ್ಯ, ರಂಜಿತ್ ಶೆಟ್ಟಿ, ಮಹಾಬಲ ಆಚಾರ್ಯ, ಮಹೇಶ್ ಕೆರೆಪಲ್ಕೆ, ಮಂಜುನಾಥ್ ಬೈಲೂರು, ಸಂದೇಶ್ ಶೆಟ್ಟಿ, ಪ್ರವೀರ್, ವಿನೋದ್ ಶೆಣೈ.
ಐದು ಉಪವಸತಿಗಳಾದ ಎರ್ಲಪಾಡಿ, ನೀರೆ, ಕಣಜಾರು, ಕೌಡೂರು ಹಾಗೂ ಬೈಲೂರಿನ ನೂರಾರು ಹಿಂದೂ ಬಂಧುಗಳು ಈ ಸಂಘಟನೆಯಲ್ಲಿ ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ವೈಭವ
ಕಾರ್ಯಕ್ರಮಕ್ಕೆ ಮೆರುಗು ನೀಡುವಂತೆ ಜಗದೀಶ್ ಆಚಾರ್ಯ ಪುತ್ತೂರು ಅವರಿಂದ ಗಾನ ಸುಧೆ ಹಾಗೂ ಮಕ್ಕಳಿಂದ ಅದ್ಭುತ ದೇಶಭಕ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಭೆಯ ಆರಂಭದಲ್ಲಿ ಪವಿತ್ರ, ಅನುತಾ ಮತ್ತು ವೀಕ್ಷ ಪ್ರಾರ್ಥಿಸಿದರು. ಸುಧೀರ್ ಭಟ್ ವೈಯಕ್ತಿಕ ಗೀತೆ ಹಾಡಿದರು. ರಮೇಶ್ ಕಲ್ಲೊಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉದಯ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ರಾತ್ರಿ ಗೆಜ್ಜೆ ಗಿರಿ ಮೇಳದವರಿಂದ “ಸೀತಾರಾಮ ಕಲ್ಯಾಣೋತ್ಸವ” ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಬಂದಂತಹ ಭಕ್ತಾದಿಗಳಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.




































