
ಬೈಲೂರು : ದಿನಾಂಕ 23-08-2025 ರಂದು ನೀರೆ ಗ್ರಾಮ ಪಂಚಾಯತ್ ನೂತನ ಕಟ್ಟಡ ಉದ್ಘಾಟನೆಗೊಳ್ಳಲಿದ್ದು ಇದರ ಪೂರ್ವಭಾವಿ ಸಭೆಯನ್ನು ಇಂದು ಪಂಚಾಯತ್ ಭವನದಲ್ಲಿ ನಡೆಸಲಾಯಿತು.

ವಿಕ್ರಮ್ ಹೆಗ್ಡೆಯವರು ಪ್ರಸ್ತಾವಿಕ ಮಾತುಗಳೊಂದಿಗೆ ಈ ಕಟ್ಟಡವು ತ್ವರಿತಗತಿಯಲ್ಲಿ ಆಗಲು ಸರಕಾರದಿಂದ ಬಂದಿರುವ ಅನುದಾನಗಳು 60 ಶೇಕಡಾ ಇದ್ದರೆ 40 ಶೇಕಡಾ ಮೊತ್ತವನ್ನು ಸ್ಥಳೀಯ ಧಾನಿಗಳು, ಊರಿನ ಪ್ರಮುಖರು, ಜಾತಿ ಧರ್ಮವೆನ್ನದೇ ದೇವಸ್ಥಾನ, ಚರ್ಚ್, ಮಸೀದಿಗಳಿಂದಲೂ ಗ್ರಾಮದ ಸದಸ್ಯರು ಸಹಕಾರ ನೀಡಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು. ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೆಚ್ಚಿನ ಸಹಕಾರವನ್ನು ನೀಡುವುದರ ಜೊತೆಗೆ ಈ ಒಂದು ಕಟ್ಟಡದ ಶೀಘ್ರಗತಿಯಲ್ಲಿ ಮುಂದುವರಿದಿರುವ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿರುವ ಬಗ್ಗೆ ಉಲ್ಲೇಖ ಮಾಡಿದರು.ಈ ಒಂದು ಪಂಚಾಯತ್ ನೀರೆ ಹೆಸರಿಗಿಂತಲೂ ಬೈಲೂರು ಎಂಬ ಹೆಸರಲ್ಲಿ ಉಲ್ಲೇಖವಾಗಿರುವುದರಿಂದ ಬೈಲೂರು ಹಾಗೂ ನೀರೆಯ ಎಲ್ಲರ ಸಹಾಭಾಗಿತ್ವದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕೆಂಬುದು ಎಲ್ಲರ ಆಶಯವೆಂದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕಾರ್ಯಕ್ರಮದ ರೂಪು ರೇಷೆ ಮತ್ತು ಈ ಒಂದು ಕಾರ್ಯಕ್ರಮವು ಜಿಲ್ಲಾ ಕಚೇರಿಯ ಶಿಷ್ಟಾಚಾರದ ಆಧಾರ ಮೇಲೆ ನಡೆಯುವ ಬಗ್ಗೆ, ಪ್ರೊಟೋ ಕಾಲ್ ಪ್ರಕಾರ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಬೇಕಾದ ಹೆಸರಿನ ಪಟ್ಟಿಯನ್ನು ಸಭೆಯ ಮುಂದಿಟ್ಟರು.ಹಾಗೂ ಸಹಕಾರ ನೀಡಿದ ಗಣ್ಯರ ಬಗ್ಗೆ ಹೆಸರನ್ನು
ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸುವ ಬಗ್ಗೆ ಇನ್ನೊಮ್ಮೆ ಚರ್ಚಿಸಿ ಮುದ್ರಿಸಲಾಗುವುದೆಂದರು ಹಾಗೂ ಈ ಒಂದು ಕಾರ್ಯಕ್ರಮದ ಜೊತೆಗೆ ಸಂಜೀವಿನಿ ಕಾರ್ಯಕ್ರಮವು ನಡೆಯುವುದರಿಂದ ಮಳಿಗೆಗಳನ್ನು 3 ದಿನ ಅಳವಡಿಸಲಾಗುವುದೆಂದರು. ಉದ್ಘಾಟನೆ ದಿನ ಸ್ಥಳೀಯ ಮಹಿಳೆಯರಿಂದ ಹಾಗೂ ಸಂಜೀವಿನಿ ಗುಂಪಿನ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದೆಂದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರಾದ ಸಚಿದಾನಂದ ಪ್ರಭು, ಉಪಾಧ್ಯಕ್ಷರಾದ ವಿದ್ಯಾ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ವಿಕ್ರಂಹೆಗ್ಡೆ, ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುಧೀರ್ ಹೆಗ್ಡೆ, ವ್ಯ. ಸೇ. ಸ. ಸಂಘದ ಅಧ್ಯಕ್ಷರಾದ ರವೀಂದ್ರ ನಾಯಕ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ ಶೆಟ್ಟಿ,ಲಯನ್ಸ್ ಕ್ಲಬ್ ಬೈಲೂರು ಇದರ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಬೈಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಚಿದಾನಂದ ಶೆಟ್ಟಿ, ಸಂಜೀವಿನಿ ಸಂಸ್ಥೆಯ ಪ್ರಮುಖರಾದ ಉಮಾ, ಮೈತ್ರಿ ಸಂಸ್ಥೆಯ ಅಧ್ಯಕ್ಷರಾದ ಹರಿಶ್ಚಂದ್ರ ಶೆಟ್ಟಿ, ಹಿಂ. ಜಾ. ವೇ ಪ್ರಮುಖರಾದ ಮಹೇಶ್ ಶೆಣೈ, ಮಾಲಿನಿ ಜೆ ಶೆಟ್ಟಿ, ರಾಮ ಕೃಷ್ಣ ಶೆಟ್ಟಿ,
ಧ. ಗ್ರಾ. ಯೋಜನೆ ಬೈಲೂರು ವಲಯ ಮೇಲ್ವಿಚಾರಕರಾದ ಯಶೋಧ ಹಾಗೂ ನೀರೆ, ಬೈಲೂರು ಗ್ರಾಮ ಪಂಚಾಯತ್ ಸದಸ್ಯರು, ಪ್ರಮುಖರು, ಸಂಘ ಸಂಸ್ಥೆಗಳ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.


ಕಾರ್ಯಕ್ರಮದ ನಿರೂಪಣೆಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಶ್ರೀಮತಿ ಅಂಕಿತರವರು ನಡೆಸಿಕೊಟ್ಟರು.
ರಮೇಶ್ ಕಲ್ಲೊಟ್ಟೆ ಇವರು ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರ ಪರಿಶ್ರಮದ ಬಗ್ಗೆ ಅಭಿನಂದನೆಗಳನ್ನು ತಿಳಿಸುತ್ತಾ ಧನ್ಯವಾದವನಿತ್ತರು.
ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
