
ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಸಕ್ರಿಯವಾಗಿರುವ ಭಜನಾ ಮಂಡಳಿಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಭಜನಾ ಮಂಡಳಿಗಳ ಒಕ್ಕೂಟ ಹಾಗೂ ಕರಾವಳಿ ಭಜನಾ ಸಂಸ್ಕಾರ ವೇದಿಕೆ, ಕಾರ್ಕಳ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಬೈಲೂರು ವಲಯದಲ್ಲಿ ಮಹತ್ವಪೂರ್ಣ “ಭಜನಾ ಪರಿಕರಗಳ ವಿತರಣಾ” ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿವೆ.
ಈ ವಿಶೇಷ ಸಮಾರಂಭವು 2025 ರ ಜುಲೈ 27 ರಂದು, ಭಾನುವಾರ ಮಧ್ಯಾಹ್ನ 2:30 ಕ್ಕೆ ಬೈಲೂರಿನ ಶ್ರೀ ಮಾರಿಯಮ್ಮ ಸಭಾಭವನದಲ್ಲಿ ಭಕ್ತಿಪೂರ್ವಕವಾಗಿ ನೆರವೇರಲಿದೆ. ಭಜನಾ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಮತ್ತು ಭಜನಾ ಮಂಡಳಿಗಳಿಗೆ ಅಗತ್ಯ ಬೆಂಬಲ ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬೈಲೂರು ವಲಯದ ವ್ಯಾಪ್ತಿಯಲ್ಲಿ ಬರುವ ಕುಕ್ಕುಂದೂರು, ಏರ್ಲಾಪಾಡಿ, ನೀರೆ, ಬೈಲೂರು, ಪಳ್ಳಿ ಮತ್ತು ಕಲ್ಯಾ ಗ್ರಾಮ ಪಂಚಾಯತ್‌ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಭಜನಾ ಮಂಡಳಿಗಳಿಗೆ ಈ ಕಾರ್ಯಕ್ರಮದಲ್ಲಿ ಭಜನಾ ಪರಿಕರಗಳನ್ನು ವಿತರಿಸಲಾಗುವುದು. ಈ ಮಂಡಳಿಗಳ ಸದಸ್ಯರು ಮತ್ತು ಬೈಲೂರು ವಲಯದ ವಿವಿಧ ಗ್ರಾಮಗಳ ಭಜನಾ ಪ್ರೇಮಿಗಳು, ಸ್ಥಳೀಯ ಮುಖಂಡರು ಹಾಗೂ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.