
ಉಡುಪಿ: ಕರಾವಳಿಯ ಐಸ್ ಕ್ರೀಮ್ ಪ್ರಿಯರಿಗಾಗಿ ಅಜ್ಜರಕಾಡು ಭುಜಂಗ ಪಾರ್ಕ್ ಸಮೀಪ ದಕ್ಷಿಣ ಕರ್ನಾಟಕದ ಅತಿದೊಡ್ಡ ಐಸ್ ಕ್ರೀಮ್ ಪಾರ್ಲರ್ “ಬಬ್ಬಾಸ್ ಕೆಫೆ” ಉದ್ಘಾಟನೆಗೆ ಸಜ್ಜಾಗಿದೆ. ಇದರ ಲೋಗೋ ಅನಾವರಣ ಕಾರ್ಯಕ್ರಮ ಉಡುಪಿಯ ಮಥುರಾ ಹೋಟೆಲ್‌ನ ಜಯ ಕೃಷ್ಣ ಸಭಾಂಗಣದಲ್ಲಿ ಶುಕ್ರವಾರ ನೆರವೇರಿತು.
ಶೀರೂರು ಶ್ರೀಗಳಿಂದ ಲೋಗೋ ಅನಾವರಣ
ಶೀರೂರು ಶ್ರೀ ವೇದವರ್ಧನ ಸ್ವಾಮೀಜಿ ಲೋಗೋ ಅನಾವರಣ ಮಾಡಿ ಆಶೀರ್ವಚನ ನೀಡಿದರು. ಈ ವೇಳೆ ಮಾತನಾಡಿದ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, “ಬಬ್ಬಾಸ್ ಕೆಫೆ” ಹಳ್ಳಿಯ ಮಕ್ಕಳಿಗೂ ಪರಿಚಿತವಾಗಲಿ ಎಂಬ ಉದ್ದೇಶದಿಂದ ಈ ಹೆಸರು ನೀಡಲಾಗಿದೆ ಎಂದು ತಿಳಿಸಿದರು.
58 ಬಗೆಯ ಐಸ್ ಕ್ರೀಮ್ ವಿಶೇಷತೆ
ಈ ಐಸ್ ಕ್ರೀಮ್ ಪಾರ್ಲರ್ ದಕ್ಷಿಣ ಕರ್ನಾಟಕದಲ್ಲಿಯೇ ಅತಿದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಲ್ಲಿ 58 ಬಗೆಯ ವಿಭಿನ್ನ ಸವಿರುಚಿಯ ಐಸ್ ಕ್ರೀಮ್ ಲಭ್ಯವಾಗಲಿದೆ. ಇದು ಕುಟುಂಬದ ಎಲ್ಲ ಸದಸ್ಯರು ಆಸ್ವಾದಿಸಬಹುದಾದ ವೈವಿಧ್ಯಮಯ ಮೆನು ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.