
ಅಯೋಧ್ಯೆ : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರವನ್ನು ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬಂದ ಬೆದರಿಕೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸೈಬರ್ ಪೊಲೀಸರಿಂದ ತನಿಖೆ ಆರಂಭವಾಗಿದೆ.
ರಾಮ ಜನ್ಮಭೂಮಿ ಟ್ರಸ್ಟ್‌ಗೆ ಸೋಮವಾರ ರಾತ್ರಿ ಈ ಬೆದರಿಕೆಯ ಇಮೇಲ್ ಬಂದಿದೆ. ತಕ್ಷಣವೇ ಟ್ರಸ್ಟ್ ಅಧಿಕಾರಿ ಮಹೇಶ್ ಕುಮಾರ್ ಅವರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಾಗಿದೆ.
ಈ ಬೆದರಿಕೆಯಿಂದಾಗಿ ಅಯೋಧ್ಯೆ ಸೇರಿದಂತೆ ಬಾರಾಬಂಕಿ ಮತ್ತು ನೆರೆಯ ಜಿಲ್ಲೆಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಬಾಂಬ್ ಶೋಧ ಕಾರ್ಯವನ್ನು ವ್ಯಾಪಕವಾಗಿ ನಡೆಸಲಾಗುತ್ತಿದೆ.
2024ನೇ ವರ್ಷದಲ್ಲಿ ಅಯೋಧ್ಯೆ ರಾಮ ಮಂದಿರಕ್ಕೆ ಸುಮಾರು 135.5 ಮಿಲಿಯನ್ ಭಕ್ತರು ಭೇಟಿ ನೀಡಿದ್ದು, ಇದು ತಾಜ್ ಮಹಲ್‌ಗೆ ಆಗಿರುವ ಭೇಟಿಗಿಂತಲೂ ಹೆಚ್ಚಿನ ಸಂಖ್ಯೆಯಾಗಿದ್ದು, ಇದರಿಂದಾಗಿ ಇಲ್ಲಿ ಭದ್ರತೆ ಮಹತ್ವ ಪಡೆಯುತ್ತಿದೆ.
ಅಧಿಕಾರಿಗಳು ಈ ಇಮೇಲ್ ಬೆದರಿಕೆಯ ಮೂಲವನ್ನು ಪತ್ತೆಹಚ್ಚಲು ತ್ವರಿತಗತಿಯಲ್ಲಿ ತನಿಖೆ ಮುಂದುವರೆಸುತ್ತಿದ್ದಾರೆ.