
ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮೀನು ವ್ಯಾಪಾರಿ ಲುಕ್ಮಾನ್ ಎಂಬುವವರನ್ನು ಕೊಲ್ಲಲು ಯತ್ನಿಸಿದ ಪ್ರಕರಣದಲ್ಲಿ ಕುಖ್ಯಾತ ರೌಡಿಶೀಟರ್ ಕೋಡಿಕೆರೆ ಲೋಕೇಶ್ (ಲೋಕು) ನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಘಟನೆ ಕುವೆಂಪು ನಗರ ಠಾಣಾ ವ್ಯಾಪ್ತಿಯ ಕುಂಟಿಕಾನದ ಬಳಿ ನಡೆದಿದ್ದು, ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದ ಸಮಯದಲ್ಲಿ ಲುಕ್ಮಾನ್ ನನ್ನು ದುಷ್ಕರ್ಮಿಗಳು ಕಾರಿನಲ್ಲಿ ಅಟ್ಟಾಡಿಸಿಕೊಂಡು ಹೋಗಿ, ಕಲ್ಲಿನಿಂದ ಹೊಡೆದು ಕೊಲ್ಲಲು ಯತ್ನಿಸಿದ್ದರು. ಆದರೆ, ಸ್ಥಳದಲ್ಲಿದ್ದ ಮೀನು ಮಾರಾಟ ಮಾಡುವ ಮಹಿಳೆಯ ಸಮಯ ಪ್ರಜ್ಞೆ ಮತ್ತು ಚಾತುರ್ಯದಿಂದ ಲುಕ್ಮಾನ್ ಬಚವಾಗಿದ್ದಾನೆ.
ಈ ಬಗ್ಗೆ ತಕ್ಷಣವೇ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದ ಬಳಿಕ ಕೋಡಿಕೆರೆ ಲೋಕು ಎಂಬ ಭಯಾನಕ ರೌಡಿಶೀಟರ್‌ನ ಬಂಧನ ಸಾಧ್ಯವಾಯಿತು. ಲೋಕು ಹಾಗೂ ಇತರ ಆರೋಪಿಗಳು ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಿದ್ದರೇ ಎಂದು ಶಂಕಿಸಲಾಗುತ್ತಿದೆ.
ಗಮನಾರ್ಹ ಸಂಗತಿಯೆಂದರೆ, ಹತ್ಯೆಯಾದ ಸುಹಾಸ್ ಶೆಟ್ಟಿ ಕೂಡ ಕೋಡಿಕೆರೆ ಗ್ಯಾಂಗ್‌ನ ಸದಸ್ಯನಾಗಿದ್ದ. ಇದೀಗ ಜೈಲಿನಲ್ಲಿರುವ ಲೋಕು ಮೇಲೆ ಹಲವಾರು ಗಂಭೀರ ಪ್ರಕರಣಗಳು ದಾಖಲಾಗಿದ್ದು, ಪೊಲೀಸ್ ನಿಗಾವಳಿ ಹೆಚ್ಚಾಗಿದೆ.