
ಅಕ್ರಮ ಸಂಬಂಧ ಪ್ರಶ್ನಿಸಿದ ತಾಯಿಯ ಕಪಾಳಕ್ಕೆ ಬಾರಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ಪಿಎಸ್‌ಐ ಮಂಜುನಾಥ್‌ನನ್ನು ಅಮಾನತು ಮಾಡಲಾಗಿದೆ. ಈ ಘಟನೆಯ ಕುರಿತು ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದೂರಿನ ಪ್ರಕಾರ, ದೊಡ್ಡಬಳ್ಳಾಪುರದ ಮಂಗಳಮ್ಮ ಎಂಬವರು ತಮ್ಮ ಪುತ್ರ ಮಂಜುನಾಥ್ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದು, ಬಸವಜ್ಯೋತಿ ಮತ್ತು ಬಸವಪ್ರಭು ಅವರ ಹೆಸರುಗಳೂ ಎಫ್‌ಐಆರ್‌ನಲ್ಲಿ ಸೇರಿವೆ. 2011ರಲ್ಲಿ ವಿವಾಹವಾದ ಮಂಜುನಾಥ್ ಎರಡು ಮಕ್ಕಳ ತಂದೆಯಾಗಿದ್ದು, ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ. ತಾಯಿ ಇದನ್ನು ಪ್ರಶ್ನಿಸಿದಾಗ, ಆಕೆಗೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾನೆ.
ಈ ಪ್ರಕರಣದ ಕುರಿತು ಮಂಜುನಾಥ್‌ಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಮೂರು ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಲಾಗಿದೆ.