
ಉಡುಪಿ: ಅತ್ರಾಡಿ ಶೇಡಿಗುಡ್ಡೆ ಬಳಿ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಮೇ 1ರ ರಾತ್ರಿ, ಅತ್ರಾಡಿ ನಿವಾಸಿ ಅಬೂಬಕ್ಕರ್ (50) ಮೇಲೆ, ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಸಂಶಯಿತರಾದ ಹಿರಿಯಡಕ ಬೊಮ್ಮಾರಬೆಟ್ಟು ನಿವಾಸಿ ಸಂದೇಶ್ (31) ಮತ್ತು ಪಾಪೂಜೆ ದರ್ಕಾಸ್ ನಿವಾಸಿ ಸುಶಾಂತ್ (32) ಹಲ್ಲೆ ನಡೆಸಿದ್ದರು. ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಆರೋಪಿಗಳನ್ನು ಮೊದಲಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ, ಬಳಿಕ ಮತ್ತೊಮ್ಮೆ 14 ದಿನಗಳ ಪೊಲೀಸ್ ವಶಕ್ಕೆ ಪಡೆದಿದ್ದರು. ತನಿಖೆಯ ನಂತರ, ನ್ಯಾಯಾಲಯ ಇಬ್ಬರಿಗೂ ಶರತ್ತುಬದ್ಧ ಜಾಮೀನು ನೀಡಿದೆ.