
ತುಮಕೂರು : ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ‘ಗೊತ್ತಿಲ್ಲ ಸಚಿವರು’ ಎಂದು ಟ್ರೋಲ್ ಮಾಡುತ್ತಿರುವವರಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಚ್ಚರಿಯ ಉತ್ತರ ನೀಡಿದ್ದಾರೆ. “ದೇಶದಲ್ಲಿ ನಂಬರ್ ಒನ್ ಗೃಹ ಸಚಿವರು ಯಾರು ಎಂದು ಕುತೂಹಲ ಇದ್ದವರು ಚಾಟ್ ಜಿಪಿಟಿಯನ್ನು ಕೇಳಿ” ಎಂದು ಅವರು ಸವಾಲೆಸೆದರು.
ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, “ನಾನು ಗೃಹ ಸಚಿವನಾಗಿ ಕೊಡುವಂತಹ ಹೇಳಿಕೆ ಬಹಳ ಜವಾಬ್ದಾರಿಯುತವಾಗಿರಬೇಕು. ಗೊತ್ತಿಲ್ಲದಿರುವುದನ್ನೆಲ್ಲ ಹೇಳುವುದಕ್ಕೆ ಆಗುವುದಿಲ್ಲ. ಹಾಗಾಗಿ ಸ್ವಾಭಾವಿಕವಾಗಿ ಗೊತ್ತಿಲ್ಲ ಎಂದು ಹೇಳಿರುತ್ತೇನೆ” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಇತರೆ ವಿಷಯಗಳ ಬಗ್ಗೆ ಪರಮೇಶ್ವರ್ ಮಾತು
- ಕೆ.ಎನ್. ರಾಜಣ್ಣ ಹೇಳಿಕೆ: ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, “ಅವರ ಹೇಳಿಕೆಗಳ ಬಗ್ಗೆ ಅವರನ್ನೇ ಕೇಳಬೇಕು. ಷಡ್ಯಂತ್ರ ರೂಪಿಸುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ” ಎಂದರು.
- ಧರ್ಮಸ್ಥಳ ಚಲೋ: ಬಿಜೆಪಿಯವರು ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆಯಲು ಧರ್ಮಸ್ಥಳಕ್ಕೆ ಹೋಗುತ್ತಿದ್ದಾರೆ. ಅವರನ್ನು ಕೇಳಿಕೊಂಡು ಯಾರಾದರೂ ದೇವಸ್ಥಾನಕ್ಕೆ ಹೋಗ್ತಾರಾ ಎಂದು ಪ್ರಶ್ನಿಸುವ ಮೂಲಕ ಬಿಜೆಪಿಯವರ ರಾಜಕೀಯ ನಡೆಯನ್ನು ಟೀಕಿಸಿದರು.